ಟೋಲ್‌ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದ ವೃದ್ದೆ: ನಾವು ಒಂದೇ ಕಡೆ 310 ರೂ. ಕಟ್ಟಿದ್ರೆ ಎಲ್ಲಿಗೆ ಹೋಗಬೇಕು ?

ಶ್ರೀರಂಗಪಟ್ಟಣ ಬಳಿಯ ಗಣಂಗೂರು ಸಮೀಪ ಆರಂಭಗೊಳ್ಳಲಿರುವ ಟೋಲ್‌ ಪ್ಲಾಜಾದಲ್ಲಿ ವೃದ್ಧೆಯೊಬ್ಬರು ಟೋಲ್‌ ಸಿಬ್ಬಂದಿ ವಿರುದ್ಧ ರೊಚ್ಚಿ ಗೆದ್ದಿದ್ದಾರೆ.

First Published Jul 1, 2023, 1:32 PM IST | Last Updated Jul 1, 2023, 1:32 PM IST

ಮಂಡ್ಯ: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಸಂಚರಿಸುವ ವಾಹನಗಳಿಗೆ ಜು.1ರಿಂದ ಮತ್ತೊಂದು ಟೋಲ್‌ ಬರೆ ಬೀದ್ದಿದೆ. ಈಗಾಗಲೇ ರಾಮನಗರದಲ್ಲಿ ಟೋಲ್‌ ಪಾವತಿಸುತ್ತಿರುವ ವಾಹನ ಮಾಲೀಕರು ಇನ್ನು ಮುಂದೆ ಮೈಸೂರಿಗೆ ತೆರಳಲು ಶ್ರೀರಂಗಪಟ್ಟಣ ಬಳಿಯ ಗಣಂಗೂರು ಸಮೀಪ ಆರಂಭಗೊಳ್ಳಲಿರುವ ಟೋಲ್‌ ಪ್ಲಾಜಾದಲ್ಲೂ ಹಣ ಪಾವತಿಸಬೇಕಾಗಿದೆ. ಈ ಮೂಲಕ  ಹೆದ್ದಾರಿಯಲ್ಲಿ ಓಡಾಡುವ ಪ್ರಯಾಣಿಕರಿಗೆ ಡಬಲ್‌ ಟೋಲ್‌ ಹೊರೆ ಬೀಳುತ್ತಿದೆ. ಈ ಟೋಲ್‌ ವಿರುದ್ಧ ವೃದ್ಧೆಯೊಬ್ಬರು ರೊಚ್ಚಿಗೆದ್ದಿದ್ದಾರೆ. ಒಂದೇ ಕಡೆ 310 ರೂಪಾಯಿ ಹಣ ಕಟ್ಟಿದ್ರೆ ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ. ನೀವು ಈ ಬಗ್ಗೆ ಮೊದಲೇ ಮಾಹಿತಿ ನೀಡಬೇಕಲ್ಲವೇ ಎಂದು ವೃದ್ಧೆ ಪ್ರಶ್ನಿಸಿದ್ದಾರೆ.ಫಾಸ್ಟ್‌ ಟ್ಯಾಗ್ ರೀಚಾರ್ಜ್ ಮಾಡಲು ಸಹ ಅವಕಾಶ ಕೊಡುತ್ತಿಲ್ಲ ಎಂದು ಆರೋಪ ಮಾಡಿದ್ಧಾರೆ.

ಇದನ್ನೂ ವೀಕ್ಷಿಸಿ: ಬಿಪಿಎಲ್‌ ಕಾರ್ಡ್‌ದಾರರಿಗೆ ಅಕ್ಕಿ ಜೊತೆ ಹಣ ಇಂದಿನಿಂದಲೇ ಹಾಕಲಾಗುವುದು: ಮುನಿಯಪ್ಪ