Asianet Suvarna News Asianet Suvarna News

ಕೊಲಂಬೋಗೆ ಹೋಗಿದ್ದು ನಿಜ, 6 ವರ್ಷಗಳ ಹಿಂದಿನ ಕಥೆ ಈಗ್ಯಾಕ್ರಿ?: ಎಚ್‌ಡಿಕೆ

ಜೆಡಿಎಸ್ ಪಕ್ಷದ ಗೌಪ್ಯ ಕಾರ್ಯಸೂಚಿ, ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರು, ಪ್ರಮುಖ ನಾಯಕರ ಜೊತೆ ಕೊಲಂಬೋಗೆ ಹೋಗಿದ್ದು ನಿಜ. ಹಾಗಂತ ಕದ್ದು ಮುಚ್ಚಿ ಹೋಗಿಲ್ಲ. 6 ವರ್ಷದ ಹಿಂದಿನ ಕಥೆ ಈಗ್ಯಾಕ್ರಿ' ಎಂದು ಎಚ್‌ಡಿ ಕುಮಾರಸ್ವಾಮಿ ಜಮೀರ್‌ ಅಹ್ಮದ್‌ಗೆ ತಿರುಗೇಟು ನೀಡಿದ್ದಾರೆ. 

ಬೆಂಗಳೂರು (ಸೆ. 13): 'ಜೆಡಿಎಸ್ ಪಕ್ಷದ ಗೌಪ್ಯ ಕಾರ್ಯಸೂಚಿ, ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಶಾಸಕರು, ಪ್ರಮುಖ ನಾಯಕರ ಜೊತೆ ಕೊಲಂಬೋಗೆ ಹೋಗಿದ್ದು ನಿಜ. ಹಾಗಂತ ಕದ್ದು ಮುಚ್ಚಿ ಹೋಗಿಲ್ಲ. 6 ವರ್ಷದ ಹಿಂದಿನ ಕಥೆ ಈಗ್ಯಾಕ್ರಿ' ಎಂದು ಎಚ್‌ಡಿ ಕುಮಾರಸ್ವಾಮಿ ಜಮೀರ್‌ ಅಹ್ಮದ್‌ಗೆ ತಿರುಗೇಟು ನೀಡಿದ್ದಾರೆ. 

ಕ್ಯಾಮೆರಾ ಇಲ್ಲದೇ ಸಖತ್ ನಟನೆ; ತಲೆನೋವು, ಜ್ವರ, ಹೊಟ್ಟೆನೋವು ಒಟ್ಟೊಟ್ಟಿಗೆ!

ಗೋವಾ ಬೇರೆ ಕಡೆಗೆ ಹೋಲಿಸಿದರೆ ಶ್ರೀಲಂಕಾದಲ್ಲಿ ಖರ್ಚು ಕಡಿಮೆ. ಹಾಗಾಗಿ ಶಾಸಕರ ಜೊತೆ ಹೋಗಿದ್ದು ನಿಜ. ನಮ್ಮನ್ನು ಜಮೀರ್‌ ಯಾಕೆ ಕರೆದುಕೊಂಡು ಹೋಗಬೇಕು? ನಮಗೆ ಹೋಗೋಕೆ ಬರೋದಿಲ್ವಾ? ಡ್ರಗ್ಸ್ ಕೇಸ್‌ ದಾರಿ ತಪ್ಪಿಸಲು ನನ್ನ ಹೆಸರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿಷಯ, ತನಿಖೆ ದಾರಿ ತಪ್ಪಬಾರದು' ಎಂದು ಎಚ್‌ಡಿಕೆ ತಿರುಗೇಟು ನೀಡಿದ್ದಾರೆ.