ಕ್ಯಾಮೆರಾ ಇಲ್ಲದೇ ಸಖತ್ ನಟನೆ; ಜ್ವರ, ತಲೆನೋವು, ಹೊಟ್ಟೆನೋವು ಎಲ್ಲಾ ಒಟ್ಟೊಟ್ಟಿಗೆ!

ಸಿಸಿಬಿ ಟೀಂಗೆ ನಟಿರರಾದ ರಾಗಿಣಿ- ಸಂಜನಾ ದೊಡ್ಡ ತಲೆನೋವಾಗಿದ್ದಾರೆ. ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗಲ್ಲ ಅಂತಿದ್ದವರು ಈಗ ಒಂದೇ ಕೋಣೆಯಲ್ಲಿ ಕುಚಿಕೂ ಫ್ರೆಂಡ್ಸಾಗಿದ್ದಾರೆ. ಇಬ್ಬರಿಗೂ ಜೈಲು ಸೇರುವ ಭಯ ಶುರುವಾಗಿದ್ದು ನವರಂಗಿ ಆಟ ಶುರು ಮಾಡಿದ್ದಾರೆ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ಕಾರಣಗಳನ್ನು ಹುಡುಕುತ್ತಿದ್ದಾರೆ.

First Published Sep 13, 2020, 1:12 PM IST | Last Updated Sep 13, 2020, 1:12 PM IST

ಬೆಂಗಳೂರು (ಸೆ. 13): ಸಿಸಿಬಿ ಟೀಂಗೆ ನಟಿರರಾದ ರಾಗಿಣಿ- ಸಂಜನಾ ದೊಡ್ಡ ತಲೆನೋವಾಗಿದ್ದಾರೆ. ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗಲ್ಲ ಅಂತಿದ್ದವರು ಈಗ ಒಂದೇ ಕೋಣೆಯಲ್ಲಿ ಕುಚಿಕೂ ಫ್ರೆಂಡ್ಸಾಗಿದ್ದಾರೆ. ಇಬ್ಬರಿಗೂ ಜೈಲು ಸೇರುವ ಭಯ ಶುರುವಾಗಿದ್ದು ನವರಂಗಿ ಆಟ ಶುರು ಮಾಡಿದ್ದಾರೆ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ಕಾರಣಗಳನ್ನು ಹುಡುಕುತ್ತಿದ್ದಾರೆ. 

ನಶೆ ಲೋಕದ ದುಷ್ಮನಿಗಳು ಒಂದೇ ರಾತ್ರಿಯಲ್ಲಿ ಒಂದಾಗಿದ್ದು ಹೇಗೆ?

ವಿಚಾರಣೆ ಶುರು ಮಾಡಿದ್ರೆ ಸಾಕು, ಇಬ್ಬರಿಗೂ ಜ್ವರ ಬರುತ್ತಂತೆ. ಇನ್ನೊಂದು ದಿನ ತಲೆನೋವು, ಮತ್ತೊಂದು ದಿನ ಹೊಟ್ಟೆ ನೋವು..! ಅವರ ಡ್ರಾಮಾ ನೋಡಿ ನೋಡಿ ಅಧಿಕಾರಿಗಳೇ ಸುಸ್ತಾಗಿದ್ದಾರೆ. ಕ್ಯಾಮೆರಾ ಇಲ್ಲದೇ ಸಖತ್ ನಾಟಕ ಮಾಡ್ತಾರೆ ಇವರಿಬ್ಬರೂ...! ನಾಳೆ ಇವರಿಬ್ಬರ ಭವಿಷ್ಯ ನಿರ್ಧಾರವಾಗಲಿದೆ.