Ticket Demand by Muslims: ಕಾಂಗ್ರೆಸ್ ಟಿಕೆಟ್ ಲೆಕ್ಕಾಚಾರವನ್ನೇ ಬದಲಿಸುತ್ತಾ ಮುಸ್ಲಿಮರ ಈ ಡಿಮ್ಯಾಂಡ್..?

3 ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲು ಡಿಮ್ಯಾಂಡ್
ಹಾವೇರಿ, ಬೀದರ್, ಬೆಂಗಳೂರ ಸೆಂಟ್ರಲ್ ಕ್ಷೇತ್ರಗಳಿಗೆ ಬೇಡಿಕೆ
2019ರಲ್ಲಿ ಒಂದು ಕಡೆ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್

First Published Mar 5, 2024, 1:56 PM IST | Last Updated Mar 5, 2024, 1:56 PM IST

ಲೋಕಸಭೆ  (Loksabha) ಟಿಕೆಟ್ ಹಂಚಿಕೆಗೆ ಕಾಂಗ್ರೆಸ್‌ನಲ್ಲಿ(Congress) ಜಾತಿ ಲೆಕ್ಕಾಚಾರ ಶುರುವಾಗಿದೆ. ತಮಗೂ ಅವಕಾಶ ನೀಡಿ ಎಂದು ಕಾಂಗ್ರೆಸ್‌ನಲ್ಲಿ ಮುಸ್ಲಿಮರು(Muslims) ಪಟ್ಟು ಹಿಡಿದಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್(Ticket) ನೀಡಲು ಒತ್ತಡ ಹಾಕಲಾಗುತ್ತಿದೆ. ಹೈಕಮಾಂಡ್ ನಾಯಕರಿಗೆ ಬೇಡಿಕೆ ಇಟ್ಟಿರುವ ಮುಸ್ಲಿಂ ನಾಯಕರು. ಬೆಂಗಳೂರು ಸೆಂಟ್ರಲ್ , ಬೀದರ್, ಹಾವೇರಿ ಟಿಕೆಟ್‌ಗೆ ಮುಸ್ಲಿಮ್‌ ನಾಯಕರು ಬೇಡಿಕೆ ಇಟ್ಟಿದ್ದಾರೆ. ಮುಸ್ಲಿಂ ಮತಗಳು ಹೆಚ್ಚುವರಿ ಕ್ಷೇತ್ರಗಳ ಟಿಕೆಟ್ ನೀಡುವಂತೆ ಡಿಮ್ಯಾಂಡ್ ಮಾಡಲಾಗಿದೆ. ಮುಸ್ಲಿಂ ನಾಯಕರ ಡಿಮ್ಯಾಂಡ್‌ನಿಂದ ಕಾಂಗ್ರೆಸ್‌ ಹೈಕಮಾಂಡ್‌ ಇಕ್ಕಟ್ಟಿಗೆ ಸಿಲುಕಿದೆ. ಅಲ್ಲದೇ ಮೈತ್ರಿ ಪಕ್ಷಗಳನ್ನು ಹಣಿಯಲು ಹೊರಟ ಕಾಂಗ್ರೆಸ್‌ಗೆ ಹೊಸ ಟೆನ್ಷನ್ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  JP Nadda: ಬೆಳಗಾವಿಯಲ್ಲಿ ಜೆ.ಪಿ.ನಡ್ಡಾ ರೌಂಡ್ಸ್ ..! ನಡ್ಡಾ ಭೇಟಿಯ ಹಿಂದಿನ ಗೇಮ್ ಪ್ಲ್ಯಾನ್ ಏನು..?