ಅತ್ತ ವಿದ್ಯಾರ್ಥಿನಿಯರ ಗದ್ದಲ, ಗಲಾಟೆ, ಇತ್ತ ಹಿಜಾಬ್ ಸಂಗ್ರಾಮದ ಮಧ್ಯೆ ಸಚಿವರ ಸ್ನೇಹ ಸಭೆ, ತಬ್ಬಿಕೊಂಡ ಜಮೀರ್

ಹಿಜಾಬ್‌ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ, ಗದ್ದಲಗಳು ನಡೆಯುತ್ತಿದ್ದರೆ ಇತ್ತ ಹಿಜಾಬ್ ಸಂಗ್ರಾಮದ ಮಧ್ಯೆ ಸಚಿವರ ಸ್ನೇಹ ಸಭೆ ನಡೆದಿದೆ. 
 

Share this Video
  • FB
  • Linkdin
  • Whatsapp

ಬೆಂಗಳೂರು, (ಫೆ.17):  ಉಡುಪಿಯಿಂದ ಶುರುವಾದ ಈ ಹಿಜಾಬ್ ವಿವಾದ ಇಡೀ ರಾಜ್ಯವನ್ನೇ ವ್ಯಾಪಸಿದೆ. ಅಲ್ಲದೇ ದೇಶ-ವಿದೇಶಗಳಲ್ಲೂ ಈ ಸುದ್ದಿ ಸದ್ದು ಮಾಡುತ್ತಿದೆ. ಇನ್ನು ಕರ್ನಾಟಕದಲ್ಲಿ ಯಾವುದೇ ಧರ್ಮದ ಸಂಕೇತವನ್ನು ಶಾಲಾ-ಕಾಲೇಜಿನಿಲ್ಲಿ ಧರಿಸುವಂತಿಲ್ಲ ಎಂದ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಅಂತಿಮವಾಗಿ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಇಡೀ ರಾಜ್ಯ ಕಾದು ಕುಳಿತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Hijab Row ಹಿಜಾಬ್ ವಿವಾದದ ಮಧ್ಯೆ ಕುಕ್ಕಿದ ಕುಂಕುಮ, ಶಿಕ್ಷಣ ಸಚಿವ ಹೇಳಿದ್ದಿಷ್ಟು...

ಆದ್ರೆ, ಇತ್ತ ಹಿಜಾಬ್ ಧರಿಸಿ ಬರದಂತೆ ಹೈಕೋರ್ಟ್ ( High Court ) ಮಧ್ಯಂತರ ಆದೇಶ ನೀಡಿದ್ದರೂ, ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎನ್ನುವಂತೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿಯೇ ( Hijab Row ) ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ನಿನ್ನೆಯಿಂದ (ಫೆ.16) ಆರಂಭವಾದ ಕಾಲೇಜುಗಳಿಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿದ್ದಾರೆ. ಅಲ್ಲದೇ ಹಿಜಾಬ್ ಬಿಡಲ್ಲ ಅಂತ ಕೆಲ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿವೆ. 

ಇಷ್ಟೆಲ್ಲಾ ಗಲಾಟೆ, ಗದ್ದಲಗಳು ನಡೆಯುತ್ತಿದ್ದರೆ ಇತ್ತ ಹಿಜಾಬ್ ಸಂಗ್ರಾಮದ ಮಧ್ಯೆ ಸಚಿವರ ಸ್ನೇಹ ಸಭೆ ನಡೆದಿದೆ. 

Related Video