Hijab Row ಹಿಜಾಬ್ ವಿವಾದದ ಮಧ್ಯೆ ಕುಕ್ಕಿದ ಕುಂಕುಮ, ಶಿಕ್ಷಣ ಸಚಿವ ಹೇಳಿದ್ದಿಷ್ಟು...

ಈ ಹಿಜಾಬ್ ವಿವಾದದ ಮಧ್ಯೆ ಕುಂಕುಮ ವಿಚಾರ ಬಂದಿದ್ದು, ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ  ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಿಷ್ಟು

First Published Feb 17, 2022, 6:00 PM IST | Last Updated Feb 17, 2022, 6:03 PM IST

ಬೆಂಗಳೂರು, (ಫೆ.17):  ಇನ್ನು ಯಾವುದೇ ಧರ್ಮದ ಸಂಕೇತವನ್ನು ಶಾಲಾ-ಕಾಲೇಜಿನಿಲ್ಲಿ ಧರಿಸುವಂತಿಲ್ಲ ಎಂದ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಅಂತಿಮವಾಗಿ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಇಡೀ ರಾಜ್ಯ ಕಾದು ಕುಳಿತಿದೆ. 

Hijab Row ಮತ್ತೋರ್ವ ವಕೀಲ ಎಂಟ್ರಿ, ಕೋರ್ಟ್‌ನಲ್ಲಿ ಕಾವೇರಿದ ಹಿಜಾಬ್ ವಾದ-ಪ್ರತಿವಾದ

ಆದ್ರೆ, ಇತ್ತ  ಹಿಜಾಬ್ ಧರಿಸಿ ಬರದಂತೆ ಹೈಕೋರ್ಟ್ ( High Court ) ಮಧ್ಯಂತರ ಆದೇಶ ನೀಡಿದ್ದರೂ, ಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎನ್ನುವಂತೆ ವಿದ್ಯಾರ್ಥಿಗಳು  ಹಿಜಾಬ್ ಧರಿಸಿಯೇ ( Hijab Row ) ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ನಿನ್ನೆಯಿಂದ (ಫೆ.16) ಆರಂಭವಾದ ಕಾಲೇಜುಗಳಿಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಕಾಲೇಜು ಬೇಕಾದ್ರೆ ಬಿಡ್ತೀವಿ. ಆದ್ರೆ, ಹಿಜಾಬ್ ಬಿಡಲ್ಲ ಅಂತ ಕೆಲ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಗಲಾಟೆ, ಗದ್ದಲಗಳು ಆಗಿರುವ ಘಟನೆಗಳು ನಡೆದಿವೆ. 

ಇನ್ನು ಈ ಹಿಜಾಬ್ ವಿವಾದದ ಮಧ್ಯೆ ಕುಂಕುಮ ವಿಚಾರ ಬಂದಿದ್ದು, ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ  ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಿಷ್ಟು