ಬಿಜೆಪಿ-ಜೆಡಿಎಸ್ ಮೈತ್ರಿ.. ಅಡಕತ್ತರಿಯಲ್ಲಿ ಸಿಎಂ ಇಬ್ರಾಹಿಂ !
ಅಲ್ಪಸಂಖ್ಯಾತ ನಾಯಕರಿಂದ ರಾಜೀನಾಮೆ ನೀಡುವಂತೆ ಒತ್ತಡ
ಸದ್ಯ ಜೆಡಿಎಸ್ನಿಂದ ಅಂತರ ಕಾಯ್ದುಕೊಳ್ಳುತ್ತಿರುವ ಇಬ್ರಾಹಿಂ
ಕಾವೇರಿ ಪ್ರತಿಭಟನೆಗೂ ಗೈರಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಮುಂದೇನು ಎಂಬ ಚಿಂತೆಯಲ್ಲಿ ಜೆಡಿಎಸ್ (jds)ರಾಜ್ಯಾಧ್ಯಕ್ಷ ಇಬ್ರಾಹಿಂ ಇದ್ದಾರೆ. ಈಗಾಗಲೇ JDSಗೆ ಮುಸ್ಲಿಂ ಮುಖಂಡರಿಂದ(Muslim leaders) ಸರಣಿ ರಾಜೀನಾಮೆ ನೀಡಲಾಗಿದೆ. ಇನ್ನೂ ಕೆಲವು ಮುಸ್ಲಿಂ ಮುಖಂಡರು ಶೀಘ್ರದಲ್ಲೇ ನಿರ್ಧಾರ ಮಾಡುವ ಸಾಧ್ಯತೆ ಇದೆ. ಸಿ.ಎಂ ಇಬ್ರಾಹಿಂ ರಾಜೀನಾಮೆ ನೀಡುವಂತೆ ಮುಸ್ಲಿಮರು ಒತ್ತಾಯ ಸಹ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ನಾಯಕರಿಂದ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗುತ್ತಿದ್ದು, ಸದ್ಯ ಜೆಡಿಎಸ್ನಿಂದ ಅಂತರ ಕಾಯ್ದುಕೊಳ್ಳುತ್ತಿರುವ ಇಬ್ರಾಹಿಂ. ಕಾವೇರಿ ಪ್ರತಿಭಟನೆಗೂ(Cauvery protest) ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ಗೈರಾಗಿದ್ದರು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರಬಹುದೆಂದು ನಿರೀಕ್ಷಿಸಿದ್ದ ಇಬ್ರಾಹಿಂ, ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆಯಾಗಿದ್ದರು. ಅತಂತ್ರ ಫಲಿತಾಂಶವಾದ್ರೆ ಕಾಂಗ್ರೆಸ್(Congress) -ಜೆಡಿಎಸ್ ಮೈತ್ರಿ ನಿರೀಕ್ಷೆಯಲ್ಲಿ ಅವರು ಇದ್ದರು.
ಇದನ್ನೂ ವೀಕ್ಷಿಸಿ: ಸಿದ್ದು ಸರ್ಕಾರದ ವಿರುದ್ಧ ಜೆಡಿಎಸ್-ಬಿಜೆಪಿ ಒಗ್ಗಟ್ಟಿನ ಜಪ: ಕಾವೇರಿ ಹೋರಾಟದಲ್ಲೂ ಒಗ್ಗಟ್ಟಾದ ಹೊಸ ದೋಸ್ತಿಗಳು