ಸಿದ್ದು ಸರ್ಕಾರದ ವಿರುದ್ಧ ಜೆಡಿಎಸ್-ಬಿಜೆಪಿ ಒಗ್ಗಟ್ಟಿನ ಜಪ: ಕಾವೇರಿ ಹೋರಾಟದಲ್ಲೂ ಒಗ್ಗಟ್ಟಾದ ಹೊಸ ದೋಸ್ತಿಗಳು
ಕಾವೇರಿ ಮೂಲಕ ಮೊದಲ ಮೈತ್ರಿ ಹೋರಾಟ ಆರಂಭ
ಮೈತ್ರಿ ಮಾತುಕತೆ ಬಳಿಕ ಒಟ್ಟಾಗಿ ಹೋರಾಟಕ್ಕೆ ಸಿದ್ಧತೆ
ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾವೇರಿ ಹೋರಾಟ
ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ(BJP) ಹಾಗೂ ಜೆಡಿಎಸ್(Jds) ಕಾವೇರಿ ಹೋರಾಟದಲ್ಲೂ ಒಂದಾಗಿವೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ಜಂಟಿ ಹೋರಾಟ ಮಾಡುತ್ತಿವೆ. ಇಂದು ವಿಕಾಸಸೌಧದ ಗಾಂಧಿ ಪ್ರತಿಮೆ ಎದುರು BJP ಸತ್ಯಾಗ್ರಹ ಮಾಡುತ್ತಿದ್ದು, ಯಡಿಯೂರಪ್ಪ(Yediyurappa), ಕುಮಾರಸ್ವಾಮಿ(Kumaraswamy) ಜತೆಗೂಡಿ ಸತ್ಯಾಗ್ರಹಕ್ಕೆ ನಿರ್ಧಾರ ಮಾಡುತ್ತಿದ್ದಾರೆ. ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ರವಾನಿಸುವ ಲೆಕ್ಕಾಚಾರ ಸಹ ಇಲ್ಲಿದೆ. ಮೈತ್ರಿ ಅಧಿಕೃತ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್‌ಗೆ ಕಾವೇರಿ ಅಸ್ತ್ರ ಸಿಕ್ಕಿದೆ. ಪ್ರತಿಭಟನೆಯಲ್ಲಿ ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಿದ್ದರು. ಈಗ ವಿಪಕ್ಷವಾಗಿರುವ ಮೈತ್ರಿ ಪಕ್ಷಗಳು ಜಂಟಿ ಹೋರಾಟ ಮಾಡುತ್ತಿವೆ. ಕುತೂಹಲ ಮೂಡಿಸಿದೆ. ದೆಹಲಿ ಮೈತ್ರಿ ಮಾತುಕತೆ ಬಳಿಕ ರಾಜ್ಯ ಬಿಜೆಪಿ-ಜೆಡಿಎಸ್ ಮೊದಲ ಹೋರಾಟ ಮಾಡುತ್ತಿವೆ. ಯಡಿಯೂರಪ್ಪ-ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ(protest) ನಡೆಯುತ್ತಿದೆ.
ಇದನ್ನೂ ವೀಕ್ಷಿಸಿ: ಕಾಂತಾರ ಕತೆಯನ್ನೇ ಹೋಲುತ್ತದೆ ಉಡುಪಿ ವಿವೇಕಾನಂದನ ಕತೆ..!