ಮತ್ತೆ ಕೈ ತಪ್ಪಿದ ಟಿಕೆಟ್​: ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ

ರಾಜ್ಯಸಭೆಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರ ವಿರುದ್ಧ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಆಕ್ರೋಶ ಹೊರಹಾಕಿದ್ದಾರೆ. ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್​ನಿಂದ ಜೈರಾಮ್​ ರಮೇಶ್​ಗೆ ಟಿಕೆಟ್​ ಒಲಿದಿದೆ. ಇದರ ಬೆನ್ನಲ್ಲೇ ಎಸ್​.ಪಿ. ಮುದ್ದಹನುಮೇಗೌಡ ಅವರು ಅಸಮಾಧಾನ ಹೊರಹಾಕಿದ್ದಾರೆ.

First Published May 30, 2022, 3:49 PM IST | Last Updated May 30, 2022, 3:51 PM IST

ತುಮಕೂರು, (ಮೇ.30): ರಾಜ್ಯಸಭೆಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರ ವಿರುದ್ಧ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಆಕ್ರೋಶ ಹೊರಹಾಕಿದ್ದಾರೆ. ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್​ನಿಂದ ಜೈರಾಮ್​ ರಮೇಶ್​ಗೆ ಟಿಕೆಟ್​ ಒಲಿದಿದೆ. ಇದರ ಬೆನ್ನಲ್ಲೇ ಎಸ್​.ಪಿ. ಮುದ್ದಹನುಮೇಗೌಡ ಅವರು ಅಸಮಾಧಾನ ಹೊರಹಾಕಿದ್ದಾರೆ.

ಮುದ್ದಹನುಮೇಗೌಡ ಬರೀ ಐರನ್ ಲೆಗ್ ಅಲ್ಲ ಅದಕ್ಕಿಂತ ಕೆಟ್ಟದ್ದು, ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ

ಕಳೆದ ಬಾರಿ ಸಂಸತ್ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡದೆ, ಈಗ ರಾಜ್ಯಸಭೆಯಲ್ಲೂ ಅವಕಾಶ ನೀಡದೆ ನನ್ನನ್ನು ರಾಜಕೀಯದಿಂದ ಮುಗಿಸುವ ಹುನ್ನಾರ ನಡೆಸಿದ್ದಾರೆ ಎಂದು ಹರಿಹಾಯ್ದರು. ನನಗೆ ಟಿಕೆಟ್ ನೀಡದೆ ವಂಚಿಸಿಬಹುದು, ಆದರೆ ಕುಣಿಗಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪುನರುಚ್ಛರಿಸಿದರು