ಸೋತವರಲ್ಲಿ ಸುಧಾಕರ್ ಮಾತ್ರನಾ?, ನಾವು ಯಾರು ಕಂಡಿಲ್ವಾ!?: ರೇಣುಕಾಚಾರ್ಯ ಪ್ರಶ್ನೆ
ಏನ್ ಪಾರ್ಟಿ ಮುಗಿಸ್ತೀನಿ ಅಂತಾ ಅವ್ನು ನಿಮಗೆ ಹೆದರಿಸಿದ್ನಾ..? ಅದಕ್ಕಾಗಿ ಭಯಗೊಂಡು ಹೋಗಿದ್ರಾ ಅವನ ಜೊತೆ ಮಾತಾಡೋಕೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸ್ವಪಕ್ಷದವರ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು: ಸೋತವರಲ್ಲಿ ಸುಧಾಕರ್ ಮಾತ್ರನಾ?, ಸುಧಾಕರ್ ಮನೆಗೆ ಸಮಾಧಾನ ಹೇಳೋಕೆ ಹೋಗುತ್ತೀರಿ. ನಾವು ಯಾರು ಕಂಡಿಲ್ವಾ!? ಎಂದು ಮಾಜಿ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಎರಡು ಖಾತೆ ಕೊಟ್ಟಿಲ್ಲ ಅಂದ್ರೆ ಪಾರ್ಟಿ ಮುಗಿಸುತ್ತೇನೆ ಎಂದವನ ಮನೆಗೆ ನೀವು ಹೋಗ್ತಿರಿ. ನಮಗೆ ಒಂದು ಕರೆ ಮಾಡಿದ್ರಾ? ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.ನಾನು ಯಾವತ್ತಿಗೂ ಬಿಜೆಪಿ ವಿರುದ್ಧ ಮಾತಾಡಿಲ್ಲ. ಬಿಜೆಪಿ ನನಗೆ ಒಂದು ತಾಯಿಯ ಸಮಾನ. ಆದರೆ ಕೆಲವು ದೌರ್ಭಾಗ್ಯಗಳನ್ನು ಅನಿವಾರ್ಯವಾಗಿ ಮಾತಾಡಬೇಕಾಗುತ್ತದೆ. ಮಾಧ್ಯಮಗಳ ಮುಂದೆ ಮಾತಾಡೋದು ತಪ್ಪು ಹೌದು. ಯಾರಿಗೋ ಅಪಮಾನ, ಅವಮಾನ ಮಾಡುವ ಅವಶ್ಯಕತೆ ನನಗಿಲ್ಲ. ನಾನು ಹೆತ್ತ ತಾಯಿ ಆಣೆಗೂ ಯಡಿಯೂರಪ್ಪ ನನಗೇನೂ ಹೇಳಿಕೊಟ್ಟಿಲ್ಲ. ಹಿಂದೆ ನನಗೂ ಅವರ ನಡುವೆ ತುಂಬಾ ಘರ್ಷಣೆಗಳು ಆಗಿವೆ. ಯಡಿಯೂರಪ್ಪ ಅಧಿಕಾರದಿಂದ ಇಳಿಯದೆ ಇದ್ದಿದ್ರೆ, ನಾವು ನಮ್ಮಪ್ಪಾರಣೆಗೂ ಅಧಿಕಾರದಿಂದ ಇಳಿಯೋಕೆ ಆಗ್ತಿರಲಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ವಿಪಕ್ಷ ನಾಯಕನ ಆಯ್ಕೆಗೆ ಹೈಕಮಾಂಡ್ ತಂತ್ರ: ಜುಲೈ 2ರಂದು ರಾಜ್ಯಕ್ಕೆ ನಾಯಕರ ಎಂಟ್ರಿ?