Asianet Suvarna News Asianet Suvarna News

ಸಿಎಂ ಬದಲಾವಣೆ ವಿಚಾರ: 'ಸಿದ್ದರಾಮಯ್ಯನವ್ರೇ ನಿಮಗೆ ಕನಸು ಯಾವಾಗ ಬಿದ್ದಿತ್ತು?'

ಸಿದ್ದರಾಮಯ್ಯಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಟಾಂಗ್‌| ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನ ಇಳಿಸುತ್ತಾರೆ ಅಂತ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ

ಬೆಂಗಳೂರು(ನ.26):  ಸಿದ್ದರಾಮಯ್ಯನವರೇ ನಿಮಗೆ ಕನಸು ಯಾವಾಗ ಬಿದ್ದಿತ್ತು ಎಂದು ಕೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಟಾಂಗ್‌ ಕೊಟ್ಟಿದ್ದಾರೆ. ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದು ಹೇಳಿಕೆಗೆ ರೇಣುಕಾಚಾರ್ಯ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ. 

ಬಿಜೆಪಿ ಶಾಸಕನ ವಿರುದ್ಧ ಹೆಚ್‌. ವಿಶ್ವನಾಥ್‌ ಕಿಡಿ..!

ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನ ಇಳಿಸುತ್ತಾರೆ ಅಂತ ನಿಮಗೆ ಯಾವಾಗ ಕನಸು ಬಿದ್ದಿತ್ತು, ಈ ಕನಸು, ರಾತ್ರಿಯೋ, ಹಗಲೋ ಎಂದು ಎಂದು ಸಿದ್ದರಾಮಯ್ಯನವರಿಗೆ ಎಂ.ಪಿ. ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ. 
 

Video Top Stories