ಸಾರ್ಥಕ ಸಾರಥ್ಯ: ರಾಜ್ಯಾಧ್ಯಕ್ಷರಾಗಿ 3 ವರ್ಷ ಪೂರೈಸಿದ ನಳಿನ್‌ ಕುಮಾರ್‌ ಕಟೀಲ್‌

 ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಮೂರು ವರ್ಷ ಪೂರ್ಣಗೊಳಿಸಿದ್ದಾರೆ. ಆಗಸ್ಟ್‌ 28ಕ್ಕೆ ಮೂರು ವರ್ಷ ಪೂರ್ಣಗೊಂಡಿದ್ದು, ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
 

First Published Aug 29, 2022, 3:54 PM IST | Last Updated Aug 29, 2022, 3:54 PM IST

ಬೆಂಗಳೂರು, (ಆಗಸ್ಟ್.29): ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಮೂರು ವರ್ಷ ಪೂರ್ಣಗೊಳಿಸಿದ್ದಾರೆ. ಆಗಸ್ಟ್‌ 28ಕ್ಕೆ ಮೂರು ವರ್ಷ ಪೂರ್ಣಗೊಂಡಿದ್ದು, ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ ಅಂತ್ಯ; ನಳಿನ್‌ ಕಟೀಲ್‌ ಅವರೇ ಮುಂದುವರೀತಾರಾ? ಹೊಸಬರು ಬರ್ತಾರಾ?

ಅಧ್ಯಕ್ಷ ಸ್ಥಾನ ಜವಾಬ್ದಾರಿ ವಹಿಸಿದ ನಂತರದಲ್ಲಿ 21 ಬಾರಿ ರಾಜ್ಯ ಸುತ್ತಾಟ ಮಾಡಿದ್ದಾರೆ. ಬೂತ್ ಕಮಿಟಿಯನ್ನು ಪೇಜ್‌ ಕಮಿಟಿಯಾಗಿ ಪರಿವರ್ತನೆ ಮಾಡುವ ಮೂಲಕ 10 ಜನರಿಗೊಬ್ಬರಂತೆ ಪ್ರಮುಖ್‌ ಗಳನ್ನು ನೇಮಕ ಮಾಡುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿದ್ದಾರೆ. ಪೇಜ್, ಶಕ್ತಿ ಕೇಂದ್ರ, ಮಹಾ ಶಕ್ತಿ ಕೇಂದ್ರದ ಸೂತ್ರದಾರ ಎಂಬ ಹೆಗ್ಗಳಿಕೆಯೂ ಅವರಿಗಿದೆ. ಈ ಮೂಲಕ ಕಾರ್ಯಕರ್ತರಿಗೆ ವಿವಿಧ ಜವಾಬ್ದಾರಿ ಕೊಡುವ ಮೂಲಕ ಅವರನ್ನು ಪಕ್ಷ ಸಂಘಟನೆಯಲ್ಲಿ ತೊಡಿಸಿಕೊಂಡಿದ್ದಾರೆ.

Video Top Stories