ಮತ್ತೊಂದು ಸಮೀಕ್ಷೆ.. ದೇಶಕ್ಕೆ ಮತ್ತೊಮ್ಮೆ ಮೋದಿಯೇ ಸಾರ್ವಭೌಮ..!

ಚಂದ್ರನಂಗಳದಲ್ಲಿ ಲ್ಯಾಂಡ್ ಆಯ್ತು "ವಿಕ್ರಮ" ಲ್ಯಾಂಡರ್..!
ಭರತ ಭೂಮಿಯಲ್ಲಿ ಮತ್ತೆ ಲ್ಯಾಂಡ್ ಆಗಲಿದೆ “ಮೋದಿ ವಿಕ್ರಮ”
ಈ ಕ್ಷಣ ಚುನಾವಣೆ ನಡೆದರೆ ಪ್ರಧಾನಿ ಮೋದಿಗೆಷ್ಟು ಸೀಟು..?

Share this Video
  • FB
  • Linkdin
  • Whatsapp

ವಿಕ್ರಮ್ ಲ್ಯಾಂಡರ್ ಚಂದ್ರಲೋಕದಲ್ಲಿ ಲ್ಯಾಂಡ್ ಆದ ಬೆನ್ನಲ್ಲೇ ಸದ್ದು ಮಾಡ್ತಿದೆ ಮೋದಿ(Narendra Modi) ವಿಕ್ರಮ. ಇದೇ ಕ್ಷಣ ಲೋಕಸಭಾ ಚುನಾವಣೆ(Loksabha election) ನಡೆದ್ರೆ ವಿಕ್ರಮ್ ಲ್ಯಾಂಡರ್'ನಂತೆ ಮೋದಿ ವಿಕ್ರಮವೂ ಲ್ಯಾಂಡ್ ಆಗೋದು ಶತಸಿದ್ಧ. ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ(Mood of the Nation Survey) ಮತ್ತೊಮ್ಮೆ ಮೋದಿಗೆ ದೇಶವಾಸಿಗಳ ಜೈಕಾರ. ಆಧುನಿಕ ಭಾರತದ ಚುನಾವಣಾ ಚರಿತ್ರೆಯ ಮಹಾವೀರ ಅಂತ ಯಾರಾದ್ರೂ ಇದ್ರೆ ಅದು ಮೋದಿ, ನರೇಂದ್ರ ಮೋದಿ. ದೇಶದ ಚುನಾವಣಾ ರಾಜಕಾರಣದಲ್ಲಿ ಮೋದಿಗೆ ಸರಿಸಾಟಿಯಾಗಬಲ್ಲ ನಾಯಕ ಮತ್ತೊಬ್ಬನಿಲ್ಲ. ಇದು ಪದೇ ಪದೇ ಪ್ರೂವ್ ಆಗ್ತಾನೇ ಇದೆ. ಈಗಾಗ್ಲೇ ಸತತ 2 ಬಾರಿ ದೇಶ ಗೆದ್ದಿರುವ ನರೇಂದ್ರ, 3ನೇ ಬಾರಿ ಪ್ರಧಾನಿ ಪಟ್ಟಕ್ಕೇರೋದಕ್ಕೆ ಸಿದ್ಧತೆ ನಡೆಸ್ತಾ ಇದ್ದಾರೆ. ಮತ್ತೊಮ್ಮೆ ನಾನೇ ಬರ್ತೀನಿ ಅಂತ ಮೋದಿ ಅಬ್ಬರಿಸಿದ್ದೂ ಆಗಿದೆ. ಇದು ಮೋದಿ ಆತ್ಮವಿಶ್ವಾಸ ಅಷ್ಟೇ ಅಲ್ಲ, ಮೂಡ್ ಆಫ್ ದಿನ ನೇಷನ್ ಕೂಡ ಹೌದು. ಭಾರತಕ್ಕೆ ಮತ್ತೊಮ್ಮೆ ಮೋದಿಯೇ ಸಾರ್ವಭೌಮ ಅಂತಿದೆ ಮಗದೊಂದು ಸಮೀಕ್ಷೆ.

ಇದನ್ನೂ ವೀಕ್ಷಿಸಿ:  ಕಾಂತಾರ, ಕೆಜಿಎಫ್‌ ಸಿನಿಮಾಗಳಿಗೆ ಯಾಕಿಲ್ಲ ನ್ಯಾಷನಲ್ ಅವಾರ್ಡ್?

Related Video