ಕಾಂತಾರ, ಕೆಜಿಎಫ್ ಸಿನಿಮಾಗಳಿಗೆ ಯಾಕಿಲ್ಲ ನ್ಯಾಷನಲ್ ಅವಾರ್ಡ್?
ಈ ಬಾರಿ ಕಾಂತಾರ ಮತ್ತು ಕೆಜಿಎಫ್ ಸಿನಿಮಾಗಳಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿಲ್ಲ. ಹೀಗಾಗಿ ಯಶ್, ರಿಷಬ್ ಶೆಟ್ಟಿ ಫ್ಯಾನ್ಸ್ ಗರಂ ಆಗಿದ್ದಾರೆ.
ಈ ಬಾರಿ ರಾಷ್ಟ್ರೀಯ ಪ್ರಶಸ್ತಿಗಳು ಹೆಚ್ಚಾಗಿ ಪ್ರಾದೇಶಿಕ ಸಿನಿಮಾಗಳಿಗೆ ಬಂದಿವೆ. ಇದಕ್ಕೆ ಸಿನಿ ಪ್ರೇಕ್ಷಕರು ಸಹ ಖುಷ್ ಆಗಿದ್ದಾರೆ. ಆದರೆ ಕನ್ನಡದ ಕಾಂತಾರ(Kantara) ಮತ್ತು ಕೆಜಿಎಫ್‌ಗೆ(KGF) ಈ ಬಾರಿ ನ್ಯಾಷನಲ್ ಅವಾರ್ಡ್(National Film Award) ಬಂದಿಲ್ಲ. ಹಾಗಾಗಿ ಸಿನಿ ಪ್ರೇಕ್ಷಕರು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಎರಡು ಸಿನಿಮಾಗಳು ಸಾವಿರಾರು ರೂಪಾಯಿ ಕೋಟಿ ಕಲೆಕ್ಷನ್ ಮಾಡಿ, ಜನರ ಮನಸ್ಸನ್ನು ಸಹ ಗೆದ್ದಿವೆ. ಈ ಎರಡು ಸಿನಿಮಾಗಳು 2022ರಲ್ಲಿ ಸೆನ್ಸಾರ್ ಆಗಿವೆಯಂತೆ. ಹಾಗಾಗಿ ಈ ಸಿನಿಮಾಗಳು ಮುಂದಿನ ವರ್ಷಕ್ಕೆ ನಾಮನಿರ್ದೇಶನ ಆಗಿವೆಯಂತೆ. ಹಾಗಾಗಿ ಮುಂದಿನ ವರ್ಷ ಈ ಸಿನಿಮಾಗಳಿಗೆ ಅವಾರ್ಡ್ ಬರುವ ಸಾಧ್ಯತೆ ಇದೆ.
ಇದನ್ನೂ ವೀಕ್ಷಿಸಿ: ಯೋಗರಾಜ್‌ಭಟ್ಟರ ಸಾರಥ್ಯದಲ್ಲಿ ಮಲ್ಟಿಸ್ಟಾರರ್ ಚಿತ್ರ: ಮೊದಲ ಬಾರಿಗೆ ಒಂದಾದ ಪ್ರಭುದೇವ-ಶಿವಣ್ಣ