ಸಚಿವರಿಗೆ ಸಿಕ್ಕಿದ ಅನುದಾನ.. ಕಾಂಗ್ರೆಸ್ ಶಾಸಕರಿಗೆ ಅಸಮಾಧಾನ..!

ಸಚಿವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಿಗೆ ಮಾತ್ರ ಈ ಅನುದಾನ ಬಳಕೆ
ಕ್ಯಾಬಿನೆಟ್ ನಿರ್ಣಯ ಪಟ್ಟಿ ಜೊತೆ ಸಿಎಂ ಭೇಟಿಗೆ ಶಾಸಕರ ನಿರ್ಧಾರ
ಹೊಸದಾಗಿ ಆಯ್ಕೆಯಾದ ಶಾಸಕರು ಸಿಎಂಗೆ ದೂರು ನೀಡಲು ಸಿದ್ಧತೆ

Share this Video
  • FB
  • Linkdin
  • Whatsapp

ಕಾಂಗ್ರೆಸ್‌ನ ಸಚಿವರಿಗೆ ಮಾತ್ರ ಅನುದಾನ ಸಿಗುತ್ತಿದೆ. ಆದ್ರೆ ಶಾಸಕರಿಗೆ(MLAs) ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಚಿವ ಸಂಪುಟದ(Cabinet) ನಡೆಗೆ ಶಾಸಕರ ಅಸಮಾಧಾನ ಮುಂದುವರಿದಿದೆ. ಸಚಿವರಿಗೆ ಸಿಗುತ್ತಿರುವ ಅನುದಾನ ನಮಗೇಕಿಲ್ಲ ಎಂದು ಶಾಸಕರ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಅನುದಾನದ ವಿಚಾರದಲ್ಲಿ ಸಚಿವರ ಜೊತೆಗಿನ ಬೇಸರ ಮುಂದುವರಿಕೆಯಾಗಿದೆ. ಸದ್ಯ ಸಚಿವ ಸಂಪುಟ ಸಭೆಯ ನಿರ್ಣಯಗಳು ಶಾಸಕರ ಕಣ್ಣು ಕುಕ್ಕುತ್ತಿವೆ. ಸಚಿವ ಸಂಪುಟದ ನಿರ್ಣಯಗಳ ಬಗ್ಗೆಯೇ ಶಾಸಕರಿಂದಲೇ ತೀವ್ರ ಬೇಸರ ವ್ಯಕ್ತವಾಗಿದೆ. ಸಚಿವರ ಕ್ಷೇತ್ರಗಳಿಗೆ ಮಾತ್ರ ನೂರಾರು ಕೋಟಿ ಬಿಡುಗಡೆ ಆಗಿದೆ. 3000 ಕೋಟಿಗೂ ಹೆಚ್ಚು ಅನುದಾನ ಕ್ಯಾಬಿನೆಟ್ ಮೂಲಕ ಅನುಮೋದನೆ ಆಗಿದೆ. ಶಾಸಕರಿಗೆ ಮಾತ್ರ ನಯಾಪೈಸೆ ಅನುದಾನ ನೀಡ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಲಾಗಿದೆ. 

ಇದನ್ನೂ ವೀಕ್ಷಿಸಿ: ಸಾವನ್ನೇ ಗೆದ್ದು ಬಂದ ವಿದ್ಯಾರ್ಥಿನಿ ಅಶ್ವಿನಿ: ಮಾತು ತಪ್ಪಿದ ಮಹಾರಾಣಿ ವಿವಿ ವಿಸಿ

Related Video