Asianet Suvarna News Asianet Suvarna News

‘ಯಾರು ಕ್ಷಮೆ ಕೇಳಿದ್ದಾರೋ ಗೊತ್ತಿಲ್ಲ, ನಾನಂತೂ ಕ್ಷಮೆ ಕೇಳಿಲ್ಲ’: ಶಾಸಕ ಬಿ.ಆರ್‌. ಪಾಟೀಲ್ ಗರಂ

ಕ್ಷಮೆ ಕೇಳುವಂತಹ ಹೇಡಿತನ ನನ್ನಲ್ಲಿ ಇಲ್ಲವೆಂದ ಶಾಸಕ
ಸಕಾಂಗ ಪಕ್ಷದ ಸಭೆ ಕರೆಯುವಂತೆ ನಮ್ಮ ಆಗ್ರಹ ಇತ್ತು
ಗೃಹ ಸಚಿವ ವಿರುದ್ಧವೇ ಗುಡುಗಿದ ಶಾಸಕ ಬಿಆರ್ ಪಾಟೀಲ್

ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ( Dr. G. Parameshwara) ವಿರುದ್ಧವೇ ಶಾಸಕ ಬಿ.ಆರ್‌. ಪಾಟೀಲ್‌(MLA B.R. Patil) ಗುಡುಗಿದ್ದಾರೆ. ಕ್ಷಮೆ ಕೇಳೋದಕ್ಕೆ ನಾವೇನು ತಪ್ಪು ಮಾಡಿಲ್ಲ. ಕ್ಷಮೆ ಕೇಳುವಂತಹ ಹೇಡಿತನ ನನ್ನಲ್ಲಿ ಇಲ್ಲ ಎಂದು ಬಿ.ಆರ್. ಪಾಟೀಲ್ ಹೇಳಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ನಮ್ಮ ಆಗ್ರಹ ಇತ್ತು. ಆತ್ಮ ಗೌರವಕ್ಕೆ ಧಕ್ಕೆ ಬಂದ್ರೆ ರಾಜೀನಾಮೆ ಕೋಡೋದಾಗಿ ಹೇಳಿದ್ದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಎದ್ದು ಹೊರ ನಡೆದಿದ್ದು ನಿಜ. ಪ್ರಿಯಾಂಕ್ ಖರ್ಗೆ, ಶರಣ ಪ್ರಕಾಶ್ ಪಾಟೀಲ್ ಸಮಾಧಾನ ಮಾಡಿದ್ರು ಎಂದು ಬಿ.ಆರ್‌. ಪಾಟೀಲ್‌ ಹೇಳಿದ್ದಾರೆ. ಅಷ್ಟೇ ಅಲ್ಲದೇ ಮೊನ್ನೆ ಸಿದ್ದರಾಮಯ್ಯ (Siddaramaiah) ಕೂಡ ಕರೆ ಮಾಡಿ ಮಾತನಾಡಿದ್ದಾರೆ. ಮುಂದಿನ ವರ್ಷದಿಂದ ಅನುದಾನ ನೀಡುವುದಾಗಿ ಸಿಎಂ ಹೇಳಿದ್ರು. ಪ್ರಿಯಾಂಕ್ ಖರ್ಗೆ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ ಎಂದರು.

ಇದನ್ನೂ ವೀಕ್ಷಿಸಿ:  ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಅಭಿನಯ ಚಕ್ರವರ್ತಿ: ಸುದೀಪ್ ದಿಢೀರ್‌ ಅಲ್ಲಿಗೆ ಹೋಗಿದ್ದೇಕೆ ?

Video Top Stories