Asianet Suvarna News Asianet Suvarna News

ಬಿಜೆಪಿ ಬೇಗುದಿ: ಅರವಿಂದ್‌ ಬೆಲ್ಲದ್‌ ಆಡಿದ ಮಾತು ವೈರಲ್!

ನಾವು ಅಧಿಕಾರದಲ್ಲಿ ಇದ್ದಾಗ ಕಾರ್ಯಕರ್ತರಿಗೆ ತೃಪ್ತಿ ಆಗೋ ಕೆಲಸ ಮಾಡಿಲ್ಲ. ಕಾರ್ಯಕರ್ತರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಅದಕ್ಕೆ ನಮ್ಮನ್ನು ಮನೆಗೆ ಕಳಸಿದ್ದಾರೆ. ಇದನ್ನು ನಾವು ಒಪ್ಪಿಕೊಳ್ಳಬೇಕು ಎಂದು ಶಾಸಕ ಅರವಿಂದ್‌ ಬೆಲ್ಲದ್‌ ಹೇಳಿದ್ದಾರೆ.

First Published Jun 28, 2023, 9:11 PM IST | Last Updated Jun 28, 2023, 9:11 PM IST

ಹುಬ್ಬಳ್ಳಿ (ಜೂ.28): ನಾವು ಅಧಿಕಾರದಲ್ಲಿ ಇದ್ದಾಗ ಕಾರ್ಯಕರ್ತರಿಗೆ ತೃಪ್ತಿ ಆಗೋ ಕೆಲಸ ಮಾಡಿಲ್ಲ. ಕಾರ್ಯಕರ್ತರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಅದಕ್ಕೆ ನಮ್ಮನ್ನು ಮನೆಗೆ ಕಳಸಿದ್ದಾರೆ. ಇದನ್ನು ನಾವು ಒಪ್ಪಿಕೊಳ್ಳಬೇಕು ಎಂದು ಶಾಸಕ ಅರವಿಂದ್‌ ಬೆಲ್ಲದ್‌ ಹೇಳಿದ್ದಾರೆ.

ಬಿಜೆಪಿ ಸೋಲಿನ ಬಗ್ಗೆ ಮುಂದುವರೆದ ಪರಾಮರ್ಶೆ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ಅರವಿಂದ ಬೆಲ್ಲದ್ ಆಡಿದ ಮಾತು ಈಗ ವೈರಲ್ ಆಗುತ್ತಿದೆ. ಮೊನ್ನೆ ಕಾರ್ಯಕರ್ತರ ಸಭೆಯಲ್ಲಿ ಬೆಲ್ಲದ್ ಆಡಿದ ಮಾತು ಈಗ ವೈರಲ್ ಆಗುತ್ತಿದೆ. ಜನ ನಮ್ಮನ್ನು ಮನೆಗೆ ಕಳಸಿಲ್ಲ. ನಮ್ಮ ಪಕ್ಷದ ಜನಾನೇ‌ ನಮ್ಮನ್ನು ಮನೆಗೆ ಕಳಸಿದ್ದಾರೆ. ನಮ್ಮ ಪಾರ್ಟಿ ನಾಯಕರು ಕೆಲವರನ್ನು ಮನೆಗೆ ಕಳಸಿದ್ದಾರೆ. ಅದು ಇರಬಹುದು, ಆದರೆ ನಾವು ಅಧಿಕಾರದಲ್ಲಿ ಇದ್ದಾಗ ಕಾರ್ಯಕರ್ತರಿಗೆ ತೃಪ್ತಿ ಆಗೋ ಕೆಲಸ ಮಾಡಿಲ್ಲ. ಕಾರ್ಯಕರ್ತರ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಅದಕ್ಕೆ ನಮ್ಮನ್ನು ಮನೆಗೆ ಕಳಸಿದ್ದಾರೆ. ಇದನ್ನು ನಾವು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.