ಅಕ್ಕಿ ಕೇಳಿದ ರೈತನಿಗೆ 'ಸಾಯುವುದು ಒಳ್ಳೇದು' ಎಂದ ಸಚಿವ: ಸಮರ್ಥನೆ ವೇಳೆ ಕತ್ತಿ ಉದ್ಧಟತನ

ರೈತನಿಗೆ ಸತ್ತು ಹೋಗು ಎಂದಿದ್ದ ಉಮೇಶ್ ಕತ್ತಿ ಸಮರ್ಥನೆ ವೇಳೆಯಲ್ಲೂ ಉದ್ಧಟತನ ಮಾತುಗಳನ್ನಾಡಿದ್ದಾರೆ.

First Published Apr 28, 2021, 5:50 PM IST | Last Updated Apr 28, 2021, 5:50 PM IST

ಬೆಳಗಾವಿ, (ಏ.28): ಲಾಕ್ ಡೌನ್ ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಅಕ್ಕಿ ಕಡಿಮೆ ಕೊಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬರಿಗೆ  ಸತ್ತು ಹೋಗು ಎಂದು ಸಚಿವ ಉಮೇಶ್ ಕತ್ತಿ  ಹೇಳಿದ್ದಾರೆ. 

ಪಡಿತರ ಅಕ್ಕಿ ಕೇಳಿದ ವ್ಯಕ್ತಿಗೆ ಸತ್ತು ಹೋಗಿ ಎಂದ ಆಹಾರ ಸಚಿವ ಉಮೇಶ್ ಕತ್ತಿ!

ಇದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ನು ಇದಕ್ಕೆ ಉಮೇಶ್ ಕತ್ತಿ ಸಮರ್ಥನೆ ವೇಳೆಯೂ ಉದ್ಧಟತನ ತೋರಿದ್ದಾರೆ.