ಇತ್ತ ಕಟೀಲ್‌ರದ್ದು ಎನ್ನಲಾದ ಆಡಿಯೋ: ಅತ್ತ ದಿಲ್ಲಿಯಲ್ಲಿ ಬೀಡುಬಿಟ್ಟ ಸಚಿವ!
ಆಡಿಯೋನಲ್ಲಿ ಸಚಿವ ಜಗದೀಶ್ ಶೆಟ್ಟರ್ ಹೆಸರು ಕೇಳಿಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಸಚಿವ ಜಗದೀಶ್ ಶೆಟ್ಟರ್ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ.
ಬೆಂಗಳೂರು, (ಜು.19): ಯಾರಿಗೂ ಹೇಳೋಕೆ ಹೋಗಬೇಡಿ.. ಈಶ್ವರಪ್ಪ ಜಗದೀಶ್ ಶೆಟ್ಟರ್ ಟೀಂ ತೆಗೀತಾ ಇದ್ದೀವಿ. ಹೊಸ ಟೀಂ ಕಟ್ಟಬೇಕು ಅಂತಾ ಅಂದುಕೊಂಡಿದೀವಿ. ಇರಿ ಆಮೇಲೆ ಹೇಳ್ತೀನಿ. ಎಲ್ಲಾ ಹೊಸ ಟೀಂ ಮಾಡ್ತಾ ಇದ್ದೀವಿ.. ಯಾರಿಗೂ ಹೇಳೋಕೆ ಹೋಗಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.
ನಾಯಕತ್ವ ಬದಲಾವಣೆ ನಿಶ್ಚಿತವಾ? ಬಿಜೆಪಿ ಅಧ್ಯಕ್ಷರದ್ದು ಎನ್ನಲಾದ ಆಡಿಯೋನಲ್ಲಿ ಬಹಿರಂಗ
ಇನ್ನು ಆಡಿಯೋನಲ್ಲಿ ಸಚಿವ ಜಗದೀಶ್ ಶೆಟ್ಟರ್ ಹೆಸರು ಕೇಳಿಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಸಚಿವ ಜಗದೀಶ್ ಶೆಟ್ಟರ್ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ.