ಬೆಂಗಳೂರಲ್ಲಿ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ: ದುಡ್ಡಿನ ಆಸೆಗೆ ತನ್ನದೇ ಅಂಗಡಿಗೆ ಕನ್ನ ಹಾಕಿದ ಉದ್ಯಮಿ !

ಆತ ಸಿರಿವಂತ ಮತ್ತಷ್ಟು ಹಣ ಮಾಡಬೇಕು ಅನ್ನೊ ಹುಚ್ಚು ಅದ್ಯಾಕೋ ಆತನ ಮನಸ್ಸನ್ನೇ ಅಡ್ಡದಾರಿ ಹಿಡಿಯುವಂತೆ ಮಾಡಿತ್ತು. ಕೋಟ್ಯಾಂತರ ಲೆಕ್ಕದಲ್ಲಿ ಚಿನ್ನದ ವ್ಯವಹಾರ ಮಾಡುವ ಆತ ಇನ್ನೂ ಹೆಚ್ಚಿನ ಹಣ ಮಾಡಲು ವಂಚನೆ ದಾರಿ ಹಿಡಿದಿದ್ದ. ಆದ್ರೆ ಆತ ಇಟ್ಟ ವಂಚಕ ಹೆಜ್ಜೆ ನೇರವಾಗಿ ಕಂಬಿ ಹಿಂದೆ ಸೇರುವಂತೆ ಮಾಡಿದೆ.
 

First Published Aug 1, 2023, 9:18 AM IST | Last Updated Aug 1, 2023, 9:18 AM IST

ತನ್ನದೇ ಅಂಗಡಿಗೆ ಕನ್ನ ಹಾಕುವ ಇವನೆಂಥಾ ಹುಚ್ಚ ಅನ್ಕೊಂಡ್ರಾ. ಇಲ್ಲ ರೀ.. ಹುಚ್ಚನಲ್ಲ.. ಈತ ಖತರ್ನಾಕ್ ಖದೀಮ. ಬೆಂಗಳೂರಿನ(Bengaluru) ನಗರಥ್ ಪೇಟೆಯಲ್ಲಿರುವ ತನ್ನದೇ ಚಿನ್ನದ ಅಂಗಡಿಗೆ (Jewelery shop) ಕನ್ನ ಹಾಕಿದ ಈ ಕಿಲಾಡಿ ಕೃತ್ಯದ ಹಿಂದೆ ಇನ್ಶುರೆನ್ಸ್ ಕ್ಲೈಮ್ ಪ್ಲಾನ್ ಇದೆ. ಹೌದು, ಗ್ರೀನ್ ಬೋರ್ಡ್ ಸ್ಕೂಟಿಯಲ್ಲಿ  ಬಂದು ಚಿನ್ನ ಕದಿಯುತ್ತಿರೋ ಇವರು ಕಿಲಾಡಿ ರಾಜ್ ಜೈನ್ ಕಳುಹಿಸಿರುವ ಹುಡುಗರು. ಜುಲೈ  12ರಂದು ತನ್ನದೇ ಹುಡುಗರಿಂದ ಕಳ್ಳತನ(Theft) ಮಾಡಿಸಿ, ಠಾಣೆಗೆ ಕಣ್ಣೀರು ಹಾಕುತ್ತ ಓಡೋಡಿ ಬಂದಿದ್ದಾನೆ. ಚಿನ್ನ ಕಳ್ಳತನದ ಕಥೆ ಕಟ್ಟಿದ್ದಾನೆ. ಮೈಸೂರು ರಸ್ತೆ ಫ್ಲೈ ಓವರ್‌ನಲ್ಲಿ 3.7 ಕೆಜಿ ಚಿನ್ನ ತೆಗೆದುಕೊಂಡು ನಮ್ಮ ಕೆಲಸಗಾರರು  ಹೋಗುವಾಗ ಚಿನ್ನದ ಬ್ಯಾಗ್ ಕದ್ದೊಯ್ದಿದ್ದಾರೆ ಎಂದು ಆರೋಪಿಸಿದ್ದ. ಆದ್ರೆ, ಕಾಟನ್ ಪೇಟೆ ಪೊಲೀಸರು ತನಿಖೆಯಲ್ಲಿ ಇನ್ಸ್ಯೂರೆನ್ಸ್ ಕ್ಲೈಂ ಮಾಡಿಸಿಕೊಳ್ಳಲು ಮಾಲೀಕ ರಾಜ್ ಜೈನನೇ ಕುತಂತ್ರ ನಡೆಸಿದ್ದು ಬಯಲಾಗಿದೆ. ಸದ್ಯ ಮಾಲೀಕ ರಾಜ್ ಜೈನ್ ಹಾಗೂ ಇಬ್ಬರು ಬಾಲಾಪರಾಧಿಗಳ ಬಂಧಿಸಿದ ಕಾಟನ್ ಪೇಟೆ ಪೊಲೀಸರು(CottonPete Police) ಬಂಧಿತರಿಂದ 2.7ಕೆಜಿ ಚಿನ್ನದ ಸರಗಳನ್ನು ವಶಕ್ಕೆ ಪಡೆದಿದ್ದಾರೆ. ದುಟ್ಟು ಮಾಡಲು ಅಡ್ಡದಾರಿ ಹಿಡಿದಿದ್ದ ಉದ್ಯಮಿ ಈಗ ಕಂಬಿ ಹಿಂದೆ ಸೇರಿದ್ದಾನೆ.

ಇದನ್ನೂ ವೀಕ್ಷಿಸಿ:  Today Rashibhavishy: ಮೇಷ ರಾಶಿಯವರಿಗೆ ಇಂದು ಸಂಗಾತಿ ವಿಚಾರದಲ್ಲಿ ಅಸಮಾಧಾನ..ಪರಿಹಾರಕ್ಕೆ ಹೀಗೆ ಮಾಡಿ