5 ವರ್ಷವೂ ಸಿದ್ದರಾಮಯ್ಯ ಸಿಎಂ, ಡಿಕೆಶಿಗಿಲ್ವಾ ರಾಜಪಟ್ಟ?: ಸಿದ್ದು ಆಪ್ತನ ವಿರುದ್ಧ ಕೆರಳಿ ಕೆಂಡವಾದ "ಬಂಡೆ" ಬ್ರದರ್ಸ್!
ಎಂ.ಬಿ. ಪಾಟೀಲ್ ಹೇಳಿಕೆಯಿಂದ, ಎರಡೂವರೆ ವರ್ಷಗಳ ನಂತ್ರ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದ ಬಂಡೆ ಅಭಿಮಾನಿಗಳ ಎದೆಯಲ್ಲಿ ಜ್ವಾಲಾಮುಖಿಯೇ ಎದ್ದಿದೆ.
ಕಾಂಗ್ರೆಸ್ ಸರ್ಕಾರದಲ್ಲಿ 5 ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಸಿದ್ದು ಅತ್ಯಾಪ್ತ ಮಂತ್ರಿ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಕಾಂಗ್ರೆಸ್'ಗೆ ರಾಜ್ಯ ಗೆದ್ದು ಕೊಟ್ಟ ಜೋಡೆತ್ತುಗಳು. ಕರ್ನಾಟಕದಲ್ಲಿ ಕಾಂಗ್ರೆಸ್‌ನನ್ನು ಪ್ರಚಂಡ ವಿಜಯದೊಂದಿಗೆ ಅಧಿಕಾರ ಸಿಂಹಾಸನದಲ್ಲಿ ಕೂರಿಸಿದ ಅವಳಿ ಯುದ್ಧವೀರರು. ಆ ಯುದ್ಧವೀರರಲ್ಲೀಗ ಒಬ್ಬ ಸಿಎಂ ಮತ್ತೊಬ್ಬ ಡಿಸಿಎಂ. ಕೊನೆಗೆ ಡಿಕೆ ಪಟ್ಟನ್ನು ಹಿಮ್ಮೆಟ್ಟಿಸಿದ ಸಿದ್ದರಾಮಯ್ಯ ರಾಜಪಟ್ಟವನ್ನು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದ್ರ ಬೆನ್ನಲ್ಲೇ ಮತ್ತೊಂದು ಮಾತು ಕೇಳಿ ಬಂದಿತ್ತು. ಅದೇ ಪವರ್ ಶೇರಿಂಗ್. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮಧ್ಯೆ ಪವರ್ ಶೇರಿಂಗ್ ಒಪ್ಪಂದ ನಡೆದಿದೆ ಅನ್ನೋ ಮಾತುಗಳು, ಊಹಾಪೋಹಗಳು ಜೋರಾಗಿ ಕೇಳಿ ಬರ್ತಾ ಇವೆ. ಇದರ ನಡುವೆ ಸಿದ್ದರಾಮಯ್ಯನವರೇ ಐದು ವರ್ಷವೂ ಮುಖ್ಯಮಂತ್ರಿಯಾಗಿರ್ತಾರೆ. ಅಧಿಕಾರ ಹಂಚಿಕೆ ಪ್ರಶ್ನೆಯೇ ಇಲ್ಲ, ಇದ್ದಿದ್ರೆ ಹೈಕಮಾಂಡ್ ನಾಯಕರು ನಮಗೆ ಹೇಳ್ತಾ ಇದ್ರು ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಶೂಟಿಂಗ್ ಸೆಟ್ಟಲ್ಲೆ ಕೊನೆಯುಸಿರೆಳೆದ ಖಳನಟ: ಇಡೀ ಭಾರತ ಮೆಚ್ಚಿಕೊಂಡಾಡಿದ್ದ ಖಳನಟನಿಗೆ ಏನಾಗಿತ್ತು?