ಶೂಟಿಂಗ್ ಸೆಟ್ಟಲ್ಲೆ ಕೊನೆಯುಸಿರೆಳೆದ ಖಳನಟ: ಇಡೀ ಭಾರತ ಮೆಚ್ಚಿಕೊಂಡಾಡಿದ್ದ ಖಳನಟನಿಗೆ ಏನಾಗಿತ್ತು?

ಹೆಚ್‌ಬಿಓ ಚಾನೆಲ್‌ನ ಫೇಮಸ್‌ ಶೋ ಆಗಿದ್ದ ರೆಮೋ ಮತ್ತು ಅಶೋಕಾ ಸೀರಿಸ್‌ನಲ್ಲೂ ನಟ ಐರಿಶ್ ರೇ ನಟಿಸಿದ್ದಾರೆ. ಮೇ 21 ಇಟಲಿಯಲ್ಲಿ ರೇ ಅಗಲಿದ್ದಾರೆ. 

Share this Video
  • FB
  • Linkdin
  • Whatsapp

ಆರ್‌ಆರ್‌ಆರ್ ಸಿನಿಮಾದ ಆ ಖಳನಟ ಇನ್ನಿಲ್ಲ. ಇಡೀ ಭಾರತೀಯ ಚಿತ್ರರಂಗ ಈ ನಟನನ್ನು ಮೆಚ್ಚಿಕೊಂಡಿತ್ತು. ಆರ್ ಆರ್ ಆರ್ ಸಿನಿಮಾದ ಆ ಬ್ರಿಟೀಷ್ ಅಧಿಕಾರಿ ಪಾಥ್ರಕ್ಕೆ ಅಚ್ಚುಕಟ್ಟಾಗಿ ಸೂಟಾಗಿದ್ದ ನಟ ಐರಿಶ್ ರೇ ಸ್ಟೀವನ್ಸನ್ ಇದ್ದಕ್ಕಿದ್ದಂತೆ ಶೂಟಿಂಗ್ ಸೆಟ್ನಲ್ಲೆ ಅಗಲಿದ್ದಾರೆ. ಸಾಯುವಂಥಾ ವಯಸ್ಸೇನು ಆಗಿರಲಿಲ್ಲ. ಜಸ್ಟ್ 58 ಅಷ್ಟೆ. ಆರ್‌ಆರ್‌ಆರ್ ನಿರ್ದೇಶಕ ರಾಜಮೌಳಿ ಕೂಡ ಭಾವುಕರಾಗಿದ್ದು,'ಶಾಕಿಂಗ್ ವಿಚಾರ....ನನಗೆ ನಂಬಲಾಗದ ಸುದ್ದಿ ಇದು ಎಂದಿದ್ದಾರೆ. ಸಿನಿಮಾ ಸೆಟ್‌ನಲ್ಲಿ ಕೆಲಸ ಮಾಡುವಾಗ ರೇ ಅದೆಷ್ಟು ಎನರ್ಜಿ ಮತ್ತು ವೈಬ್ರೆನ್ಸ್‌ ತಂದುಕೊಟ್ಟಿದ್ದಾರೆ. ಅವರ ಜೊತೆ ಮಾಡಿದ ಖುಷಿ ನನಗೆ ತುಂಬಾ ಇದೆ. ನನ್ನ ಪ್ರಾರ್ಥನೆ ಅವರ ಕುಟುಂಬದ ಜೊತೆ ಇರಲಿದೆ. ರೇ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಟ್ವೀಟ್ ಮಾಡಿದ್ದಾರೆ. ಪನಿಶರ್‌:ದಿ ವಾರ್‌ ಜೋನ್‌, ಕಿಂಗ್ ಆಥರ್, ಥಾರ್‌ ಸಿನಿಮಾಗಳಲ್ಲಿ ರೇ ಸ್ಟೀವನ್ಸನ್ ಅಭಿನಯಿಸಿದ್ದಾರೆ. 

ಇದನ್ನೂ ವೀಕ್ಷಿಸಿ: ಹೇಗಿದ್ದಾಳೆ ನೋಡಿ ಧ್ರುವ ಸರ್ಜಾ ಮಗಳು? : ತಲೆದಿಂಬು ಹಿಡ್ಕೊಂಡು ಜಾಹ್ನವಿ ಕಪೂರ್ ಹೊರಟಿದ್ದೆಲ್ಲಿಗೆ ?

Related Video