ಕಾರ್ಯಕರ್ತನ ಮೇಲೆ ಎಂ.ಬಿ. ಪಾಟೀಲ್‌ ದರ್ಪ: ಯುವಕನಿಗೆ ಕಪಾಳ ಮೋಕ್ಷ

ಎಂ.ಬಿ. ಪಾಟೀಲ್‌ರಿಂದ ಯುವಕನಿಗೆ ಕಪಾಳ ಮೋಕ್ಷ 
ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನಿಸಿದ ಯುವಕ
ಯುವಕನ ಪ್ರಶ್ನೆಗೆ ಉತ್ತರಿಸಲಾಗದೇ ಕಪಾಳ ಮೋಕ್ಷ

Share this Video
  • FB
  • Linkdin
  • Whatsapp

ವಿಜಯಪುರ: ಮಾಜಿ ಸಚಿವ ಎಂ.ಬಿ. ಪಾಟೀಲ್‌ ಕಾರ್ಯಕರ್ತನ ಮೇಲೆ ದರ್ಪ ತೋರಿದ್ದಾರೆ. ಈ ಘಟನೆ ಬಬಲೇಶ್ವರ ಕ್ಷೇತ್ರದ ದೇವಾಪೂರ ಗ್ರಾಮದಲ್ಲಿ ನಡೆದಿದೆ. ಎಂ.ಬಿ ಪಾಟೀಲ್‌ ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಚುನಾವಣೆ ಇದೆ ಎಂದು ನಮ್ಮ ಗ್ರಾಮಕ್ಕೆ ಬರುತ್ತಿದ್ದೀರಿ, ಆದ್ರೆ ಇಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಾ? ಎಂದು ಯುವಕ ಪ್ರಶ್ನಿಸಿದ್ದಾನೆ. ಯುವಕನ ಪ್ರಶ್ನೆಗೆ ಉತ್ತರಿಸಲಾಗದೇ, ಎಂ.ಬಿ. ಪಾಟೀಲ್‌ ತುಂಬಿದ ಸಭೆಯಲ್ಲಿ ಆತನ ಕಪಾಳಕ್ಕೆ ಹೊಡೆದಿದ್ದಾರೆ. ಈ ಮೂಲಕ ದರ್ಪವನ್ನು ತೋರಿದ್ದಾರೆ. 

ಇದನ್ನೂ ವೀಕ್ಷಿಸಿ: ಸಿದ್ದು ಈ ಬಾರಿ ಸೋಲ್ತಾರೆ, ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನನೂ ಬರಲ್ಲ: ಈಶ್ವರಪ್ಪ

Related Video