ಬಿಜೆಪಿ ನಾಯಕರ ವಿರುದ್ಧ ಎಂ.ಬಿ.ಪಾಟೀಲ್‌ ಹೊಸ ಬಾಂಬ್‌: ವಿಪಕ್ಷ ನಾಯಕನ ಆಯ್ಕೆಗೆ ಕೋಟಿ ಕೋಟಿ ಡೀಲ್‌ ?

ವಿರೋಧ ಪಕ್ಷ ನಾಯಕನ ಆಯ್ಕೆ ವಿಳಂಬಕ್ಕೆ ಕೇಸರಿ ಪಡೆಗೆ ಎಂ.ಬಿ. ಪಾಟೀಲ್‌ ಟಾಂಗ್ ಕೊಟ್ಟಿದ್ದಾರೆ. 
 

Share this Video
  • FB
  • Linkdin
  • Whatsapp

ವಿರೋಧ ಪಕ್ಷದ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಎಂ.ಬಿ.ಪಾಟೀಲ್‌ (MB Patil)ಹೊಸ ಬಾಂಬ್‌ವೊಂದನ್ನು ಸಿಡಿಸಿದ್ದಾರೆ. ಪ್ರತಿಪಕ್ಷ ನಾಯಕನ(opposition leader) ಆಯ್ಕೆಗೆ ಬಿಜೆಪಿಯಲ್ಲಿ (BJP) ಕೋಟಿ ಕೋಟಿ ಡೀಲ್‌ ನಡೆಯುತ್ತಿದ್ಯಾ ಎಂಬ ಅನುಮಾನವನ್ನು ಇದು ಹುಟ್ಟಿಹಾಕಿದೆ. ಈ ಮೂಲಕ ವಿರೋಧ ಪಕ್ಷ ನಾಯಕನ ಆಯ್ಕೆ ವಿಳಂಬಕ್ಕೆ ಎಂ.ಬಿ. ಪಾಟೀಲ್‌ ಟಾಂಗ್ ಕೊಟ್ಟಿದ್ದಾರೆ. ಸಿಎಂ ಸ್ಥಾನ (CM Post) ಸೇಲ್‌ಗೆ ಇಟ್ಟ ಹಾಗೆ, ವಿಪಕ್ಷ ಸ್ಥಾನ ಇಟ್ಟಿರಬಹುದು ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ. ವಿರೋಧ ಪಕ್ಷದ ಸ್ಥಾನಕ್ಕೆ 110 ಕೋಟಿ ಫಿಕ್ಸ್‌ ಮಾಡಿದ್ದಾರೆ ಏನೋ, ಯಾರಿಗೆ ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಮೂರು ಬೈಕ್‌ಗಳ ನಡುವೆ ಸರಣಿ ಅಪಘಾತ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Related Video