Asianet Suvarna News Asianet Suvarna News

ಬಿಜೆಪಿಯಲ್ಲಿ ಲಿಂಗಾಯತ ನಾಯಕರು ಸೇಫ್‌ ಅಲ್ಲ, 2024ರ ಬಳಿಕ ಬಿಎಸ್‌ವೈ ಪರಿಸ್ಥಿತಿ ದಿ ಎಂಡ್‌ : ಎಂ.ಬಿ. ಪಾಟೀಲ್‌

ಲಿಂಗಾಯತ ನಾಯಕರು ಬಿಜೆಪಿಯಲ್ಲಿ ಸೇಫ್‌ ಅಲ್ಲ. 2024ರ ವೇಳೆಗೆ ಸಂಪೂರ್ಣ ಲಿಂಗಾಯತರು ಕಾಂಗ್ರೆಸ್‌ ಜೊತೆ ಇರಲಿದ್ದಾರೆ ಎಂದು ಎಂ.ಬಿ. ಪಾಟೀಲ್‌ ವಿಜಯಪುರದಲ್ಲಿ ಹೇಳಿದ್ದಾರೆ.

First Published May 4, 2023, 1:34 PM IST | Last Updated May 4, 2023, 1:34 PM IST

ವಿಜಯಪುರ: ಲಿಂಗಾಯತ ವಿವಾದದ ಬೆನ್ನಲೇ ಎಂ.ಬಿ. ಪಾಟೀಲ್‌ ಮತ್ತೊಂದು ಹೊಸ ಬಾಂಬ್‌ ಸಿಡಿಸಿದ್ದಾರೆ. ಬಿಜೆಪಿಯಲ್ಲಿ ಲಿಂಗಾಯತ ನಾಯಕರು ಸೇಫ್‌ ಅಲ್ಲ. 2018ರಲ್ಲಿ ಬಿಜೆಪಿಗೆ ಮತ ಚಲಾಯಿಸಿರುವ ಲಿಂಗಾಯತರು ಈ ಬಾರಿ ಕಾಂಗ್ರೆಸ್‌ಗೆ ಮತಹಾಕುತ್ತಾರೆ. ಈಗಾಗಲೇ 50 ಪ್ರತಿಶತದಷ್ಟು ಲಿಂಗಾಯತರು ಕಾಂಗ್ರೆಸ್‌ ಕಡೆಗೆ ಬಂದಿದ್ದಾರೆ. 2024ರ ವೇಳೆಗೆ ಸಂಪೂರ್ಣ ಲಿಂಗಾಯತರು ಕಾಂಗ್ರೆಸ್‌ ಜೊತೆ ಇರ್ತಾರೆ. ಅಲ್ಲದೇ 2023ರ ಬಳಿಕ ಬಸವರಾಜ ಬೊಮ್ಮಾಯಿಯವರಿಗೂ ಶೆಟ್ಟರ್‌, ಸವದಿ ಪರಿಸ್ಥಿತಿ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.  ಜಗದೀಶ್‌ ಶೆಟ್ಟರ್‌ಗೆ ಬಿಜೆಪಿ ಮೋಸ ಮಾಡಿತು. ಸವದಿಗೆ ಟಿಕೆಟ್‌ ನೀಡದೇ ಅವರನ್ನು ಹತ್ತಿಕುವ ಪ್ರಯತ್ನ ಮಾಡಿತು. ಇನ್ನೂ ಯಡಿಯೂರಪ್ಪ ಕೆಜೆಪಿ ಪಕ್ಷ  ಕಟ್ಟಿ, ಬಿಜೆಪಿ ಎದೆಗೆ ಚೂರಿ ಹಾಕಿದ್ರು ಅಲ್ವಾ ಎಂದು ಎಂ.ಬಿ. ಪಾಟೀಲ್‌ ಪ್ರಶ್ನಿಸಿದ್ದಾರೆ.

ಇದನ್ನೂ ವೀಕ್ಷಿಸಿ: ನಮ್ಮ ನಿರ್ಧಾರದಿಂದ ಸಮಾಜಘಾತುಕರಿಗೆ ನೋವಾಗಬೇಕು, ಬಿಜೆಪಿಗೆ ಯಾಕೆ ಆಗುತ್ತಿದೆ? : ಸಿದ್ದರಾಮಯ್ಯ