ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ: ಬಸನಗೌಡ ಪಾಟೀಲ ಯತ್ನಾಳ್‌

ಹಲವು ನಿಯಮಗಳನ್ನು ಮಾಡಿ ಗ್ಯಾರಂಟಿ ನೀಡಿದ್ದಾರೆ. ಅದಕ್ಕಾಗಿ ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಬಂದ್ ಆಗುತ್ತವೆ ಎಂದು  ವಿಜಯಪುರ ಬಸನಗೌಡ ಪಾಟೀಲ ಯತ್ನಾಳ್‌ ಹೇಳುತ್ತಾರೆ.

Share this Video

ವಿಜಯಪುರ: ಗ್ಯಾರಂಟಿಗಳು ಲೋಕಸಭಾ ಚುನಾವಣೆವರೆಗೂ(Loksabha Election) ಮಾತ್ರ ಇರುತ್ತವೆ. ನಂತರ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಂದ್ ಆಗುತ್ತವೆ ಎಂದು ವಿಜಯಪುರದಲ್ಲಿ(Vijayapura) ಶಾಸಕ ಬಸನಗೌಡ ಪಾಟೀಲ ಯತ್ನಾಳ್‌(Basanagowda Patil Yatnal) ಹೇಳಿದ್ದಾರೆ. ಹಲವು ನಿಯಮಗಳನ್ನು ಮಾಡಿ ಗ್ಯಾರಂಟಿ(Guarantees) ನೀಡಿದ್ದಾರೆ. ಅದಕ್ಕಾಗಿ ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ಬಂದ್ ಆಗುತ್ತವೆ. ಪಂಚಮಸಾಲಿ ಜಯಮೃತ್ಯುಂಜಯ ಸ್ವಾಮಿ ಪರ ಶಾಸಕ ಯತ್ನಾಳ್‌ ಬ್ಯಾಟಿಂಗ್ ಮಾಡಿದ್ದು, ಮಾಜಿ ಸಚಿವ ಮುರುಘೇಶ ನಿರಾಣಿ ವಿರುದ್ಧ ಕಿಡಿಕಾರಿದ್ದಾರೆ. ಎಲ್ಲಾರ ಎಲ್ಲ ರಹಸ್ಯಗಳು ಇರುತ್ತವೆ. ಹಲ್ಕಾ ಮಾತನಾಡುವವರ ಬಗ್ಗೆ ನಾನು ಮಾತಾಡಲ್ಲ ಎಂದು ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು. ಸಚಿವ ಶಿವಾನಂದ ಪಾಟೀಲ ವಿರುದ್ಧವೂ ಯತ್ನಾಳ್‌ ಕಿಡಿಕಾರಿದ್ದು, ಮಗಳನ್ನು ಕರೆದುಕೊಂಡು ಹೋಗಿ ಬಾಗಲಕೋಟಗೆ ನಿಲ್ಲಿಸಿದ್ದಾರೆ. ಅದು ಶಿವಾನಂದ ಪಾಟೀಲರ ಉದ್ಯೋಗ ಆಗಿದೆ. ಇದೊಂದು ಉದ್ಯೋಗ ಮಾಡಿಕೊಂಡು ಜೀವನ ಮಾಡ್ತಾ ಇದ್ದಾರೆ ಎಂದು ಶಿವಾನಂದ ವಿರುದ್ಧ ಕಿಡಿಕಾರಿದರು.

ಇದನ್ನೂ ವೀಕ್ಷಿಸಿ:  ಆರ್ಟಿಕಲ್‌ 370 ರದ್ದು ಮಾಡಲು ಮೋದಿ ಸರ್ಕಾರ ನಿರ್ಧರಿಸಿದ್ದು ಯಾಕೆ? ಇದು ದೇಶದ ಹಿತದೃಷ್ಟಿಗೆ ಎಷ್ಟು ಮುಖ್ಯ?

Related Video