ಇಂಡಿಯಾ ಕೂಟ ನಾಯಕರಿಂದಲೂ ಸರ್ಕಾರ ರಚನೆ ಕಸರತ್ತು!INDIAಗೆ ನಮ್ಮ ಬೆಂಬಲ ಎಂದ ಮಮತಾ ಬ್ಯಾನರ್ಜಿ
ಎಐಸಿಸಿ ಅಧ್ಯಕ್ಷ ಖರ್ಗೆ ನಿವಾಸದಲ್ಲಿ ಹೈವೋಲ್ಟೇಜ್ ಮೀಟಿಂಗ್
ಇಂಡಿಯಾ ಕೂಟಕ್ಕೆ ನಮ್ಮ ಬೆಂಬಲ ಎಂದ ಮಮತಾ ಬ್ಯಾನರ್ಜಿ
ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಅಖಿಲೇಶ್ ಯಾದವ್
ಲೋಕಸಭಾ ಚುನಾವಣಾ(Lok Sabha elections 2024) ಫಲಿತಾಂಶ ಜೂನ್ 4ರಂದು ಹೊರಬಂದಿದ್ದು, ಎನ್‌ಡಿಎ(NDA) ಸರಳ ಬಹುಮತವನ್ನು ಪಡೆದಿದೆ. ಇಂಡಿಯಾ ಒಕ್ಕೂಟ ಕೂಡ 234 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚಿಸಲು ತಯಾರಿ ನಡೆಸುತ್ತಿದೆ. ಇಂಡಿಯಾ(INDIA) ಕೂಟದ ನಾಯಕರು ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ನಿವಾಸದಲ್ಲಿ ಹೈವೋಲ್ಟೇಜ್ ಮೀಟಿಂಗ್ ನಡೆದಿದೆ. ಇಂಡಿಯಾ ಕೂಟಕ್ಕೆ ನಮ್ಮ ಬೆಂಬಲ ಎಂದು ಮಮತಾ ಬ್ಯಾನರ್ಜಿ(Mamata Banerjee) ಘೋಷಿಸಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಅಖಿಲೇಶ್ ಯಾದವ್ , ಶರತ್ ಪವರ್, ಆಪ್ ನಾಯಕರು, ಡಿಎಂಕೆ, ಟಿಎಂಸಿ, ಎಡ ಪಕ್ಷಗಳ ನಾಯಕರು INIDIA ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ವೀಕ್ಷಿಸಿ: ದೆಹಲಿಯಲ್ಲಿಂದು ಹೈವೋಲ್ಟೇಜ್ ಸಭೆ: ನಿತೀಶ್ ಕುಮಾರ್ , ಚಂದ್ರಬಾಬು ನಾಯ್ಡು ಮೀಟಿಂಗ್‌ನಲ್ಲಿ ಭಾಗಿ