ಖರ್ಗೆ 'ಕೈ'ಯಲ್ಲಿ ಅಧಿಕಾರ: ಏನಾಗಲಿದೆ ರಾಜ್ಯ ಕಾಂಗ್ರೆಸ್ ಚಿತ್ರಣ?
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಕೈಗೆ ಕಾಂಗ್ರೆಸ್ ಅಧಿಕಾರ ಸಿಕ್ಕಿರುವುದರಿಂದ, ಇದೀಗ ರಾಜ್ಯದಲ್ಲಿ 3ನೇ ಬಣ ಮುನ್ನೆಲೆಗೆ ಬಂದಂತಾಗಿದೆ.
ರಾಜ್ಯ ಕಾಂಗ್ರೆಸ್’ನಲ್ಲಿ 3ನೇ ಪವರ್ ಸೆಂಟರ್ ಆಗಿ ಮಲ್ಲಿಕಾರ್ಜುನ ಖರ್ಗೆ ಎದ್ದು ನಿಂತಿದ್ದು, ಇದು ಸಿದ್ದರಾಮಯ್ಯ ಬಣಕ್ಕೆ ಲಾಭ ತರಲಿದೆಯಾ? ಅಥವಾ ಡಿಕೆಶಿ ಬಣಕ್ಕೆ ಬಲ ಕೊಡಲಿದೆಯಾ ಎಂಬ ಕುತೂಹಲ ಮೂಡಿಸಿದೆ. ಆದರೆ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿರುವ ಹಿರಿಯ ನಾಯಕರ ಆಟ, ಮಲ್ಲಿಕಾರ್ಜುನ ಖರ್ಗೆಯ ಮುಂದೆ ನಡೆಯೋದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಖರ್ಗೆ ಎಂಟ್ರಿಯು ಕರ್ನಾಟಕ ಕಾಂಗ್ರೆಸ್ ಕೋಟೆಯಲ್ಲಿ ಹೊಸ ಸಮಸ್ಯೆ ಸೃಷ್ಠಿಸುತ್ತಾ ಅಥವಾ ಇರುವ ಸಮಸ್ಯೆಗೆ ಪರಿಹಾರ ಒದಗಿಸುತ್ತಾ ಎಂಬುದು ಕೂತೂಹಲ.
ಮಲ್ಲಿಕಾರ್ಜುನ್ ಖರ್ಗೆ ಎಐಸಿಸಿ ಅಧ್ಯಕ್ಷ, ಯಾದಗಿರಿ ಜಿಲ್ಲೆಯಾದ್ಯಂತ ಮುಗಿಲು ಮುಟ್ಟಿದ ಸಂಭ್ರಮ