ಮಲ್ಲಿಕಾರ್ಜುನ್ ಖರ್ಗೆ ಎಐಸಿಸಿ ಅಧ್ಯಕ್ಷ, ಯಾದಗಿರಿ ಜಿಲ್ಲೆಯಾದ್ಯಂತ ಮುಗಿಲು ಮುಟ್ಟಿದ ಸಂಭ್ರಮ

ಮಲ್ಲಿಕಾರ್ಜುನ ಖರ್ಗೆ ಎಐಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಯಾದಗಿರಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.

Yadgir District celebrates reached peak after Mallikarjun Kharge elected as a AICC President gow

ವರದಿ: ಪರಶುರಾಮ ಐಕೂರ್,  ಏಷ್ಯಾನೆಟ್ ಸುವರ್ಣ ನ್ಯೂಸ್ 

ಯಾದಗಿರಿ (ಅ.20): ಮಲ್ಲಿಕಾರ್ಜುನ ಖರ್ಗೆ ಎಐಸಿಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಯಾದಗಿರಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ಶಶಿ ತರೂರ್ ನಡುವೆ ಚುನಾವಣೆ ನಡೆದಿತ್ತು. ಆದ್ರೆ ಮಲ್ಲಿಕಾರ್ಜುನ ಖರ್ಗೆ ಎದುರಾಳಿ ಶಶಿ ತರೂರ್ ವಿರುದ್ಧ ಅತ್ಯಧಿಕ ಮತಗಳಿಂದ ಜಯಗಳಿಸಿ ಎಐಸಿಸಿ ಅಧ್ಯಕ್ಷ ಗದ್ದುಗೆ ಏರಿದ್ದಾರೆ. ಇದರಿಂದಾಗಿ ಎಐಸಿಸಿ ಅಧ್ಯಕ್ಷನಾದ ಎರಡನೇ ಕನ್ನಡಿಗ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ 9 ಬಾರಿ ಕರ್ನಾಟಕ ವಿಧಾನಸಭೆ, 2 ಬಾರಿ ಸಂಸತ್ ಗೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಯಾದಗಿರಿ ಜಿಲ್ಲೆಯ ಗುರಮಿಠಕಲ್ ವಿಧಾನಸಭಾ ಕ್ಷೇತ್ರದಿಂದ ಸತತ 8 ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ, ಇದರಿಂದಾಗಿ ಅವರ ಹೆಚ್ಚಿನ ರಾಜಕೀಯ ಏಳಿಗೆ ಕಂಡಿದ್ದೆ ಯಾದಗಿರಿ ಜಿಲ್ಲೆಯಿಂದ. ಮೊದಲ ಬಾರಿಗೆ ಗುರಮಿಠಕಲ್ ಕ್ಷೇತ್ರದಿಂದ 1972 ರಲ್ಲಿ ಸ್ಪರ್ಧಿಸಿದ ಅವರು ಗೆಲುವಿನ ನಗೆ ಬೀರುತ್ತಾರೆ. ಜೊತೆಗೆ 1976 ರಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾಗಿ ಆಯ್ಕೆಯಾದರು. 1978 ರಲ್ಲಿ ಎರಡನೇ ಬಾರಿ ಗುರಮಿಠಕಲ್  ಕ್ಷೇತ್ರದಿಂದ ಚುನಾಯಿತರಾದರು. ಡಿ.ದೇವರಾಜ್ ಅರಸ ಅವರ ಕ್ಯಾಬಿನೆಟ್ ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜ್ಯ ಸಚಿವರಾಗಿ ನೇಮಕಗೊಂಡರು.

1980 ರಲ್ಲಿ ಗುಂಡೂರಾವ್ ಕ್ಯಾಬಿನೆಟ್ ನಲ್ಲಿಯೂ ಸಚಿವರಾದರು. 1983 ರಲ್ಲಿ ಮೂರನೆ ಬಾರಿ ಶಾಸಕರಾದರು. 1985 ರಲ್ಲಿ ನಾಲ್ಕನೇ ಬಾರಿ ಶಾಸಕ ಹಾಗೂ ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷದ ಉಪ ನಾಯಕರಾಗಿ ಆಯ್ಕೆಗೊಂಡರು. 1989 ರಲ್ಲಿ ಐದನೇ ಬಾರಿ ಶಾಸಕ, 1990 ರಲ್ಲಿ ಅವರು ಎಸ್.ಬಂಗಾರಪ್ಪ ಸಚಿವ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದರು. 2005 ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಇದು ಮಲ್ಲಿಕಾರ್ಜುನ ಖರ್ಗೆ ಅವರು ಯಾದಗಿರಿ ಜಿಲ್ಲೆಯ ಗುರಮಿಠಕಲ್ ಕ್ಷೇತ್ರದಿಂದ ಆಯ್ಕೆಯಾಗಿ ರಾಜಕೀಯದಲ್ಲಿ ಕಂಡ ಏಳಿಗೆಯಾಗಿದೆ.

ಪಕ್ಷ - ಗಾಂಧಿ ಕುಟುಂಬದ ನಿಷ್ಠ ಖರ್ಗೆ ತಮ್ಮ ಮಗನಿಗೆ ಸೋನಿಯಾ ಮಗಳು ಪ್ರಿಯಾಂಕಾ ಹೆಸರಿಟ್ಟ ಕಥೆ ಗೊತ್ತೇ?

ದೀಡ್ ನಮಸ್ಕಾರ ಹಾಕಿ ಜೈಕಾರ ಕೂಗಿ ಸಂಭ್ರಮ: ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಯ ನೂತನ ಅಧ್ಯಕ್ಷರಾಗಿದ್ದಕ್ಕೆ ಯಾದಗಿರಿ ಜಿಲ್ಲೆಯಾದ್ಯಂತ ಸಂಭ್ರಮ ಜೋರಾಗಿಯೇ ಮಾಡಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಅಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಅಂಬೇಡ್ಕರ್ ಯುವ ಮಂಡಳಿ ವತಿಯಿಂದ ದೀಡ್ ನಮಸ್ಕಾರ ಹಾಕಿ ಸಂಭ್ರಮಾಚರಣೆ ಮಾಡಲಾಯಿತು. ದೋರನಹಳ್ಳಿ ಗ್ರಾಮದ ಹನುಮಂತ, ಶೇಖಪ್ಪ ಎಂಬ ಇಬ್ಬರೂ ಮಲ್ಲಿಕಾರ್ಜುನ ಖರ್ಗೆ ಅವರ ಅಪ್ಪಟ ಅಭಿಮಾನಿಯಾಗಿದ್ದು, ತಮ್ಮ ನಾಯಕನಿಗೆ ಎಐಸಿಸಿ ಅಧ್ಯಕ್ಷ ಹುದ್ದೆ ಒಲಿದಿದ್ದರಿಂದ ಗ್ರಾಮದ ಅಂಬೇಡ್ಕರ್ ವೃತ್ತದಿಂದ ಅಂಭಾ ಭವಾನಿ ದೇವಸ್ಥಾನದವರೆಗೆ ದೀಡ್ ನಮಸ್ಕಾರ ಹಾಕಿದರು. ಈ ದೀಡ್ ನಮಸ್ಕಾರ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹಲವು ಅಭಿಮಾನಿಗಳು ಭಾಗಿಯಾಗಿದ್ದರು. ಜೊತೆಗೆ ತಮಟೆ ಬಾರಿಸುತ್ತ ದೀಡ್ ನಮಸ್ಕಾರ ಹಾಕಿ ಸಂಭ್ರಮಾಚರಣೆ ಮಾಡಿದರು.

ಖಡಕ್‌ ಖರ್ಗೆ ಮುಂದಿದೆ 5 ಕಟ್ಟರ್‌ ಸವಾಲು!

ಕಷ್ಟ ದಿನಗಳನ್ನು ಕಳೆಯುತ್ತಿರುವ 'ಕೈ' ಗೆ ಆಸರೆಯಾಗ್ತಾರಾ ಖರ್ಗೆ?
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಗೆ ಈಗ ಬಾಸ್ ಆಗಿದ್ದಾರೆ. ಕನ್ನಡಿಗರೊಬ್ಬರು ಕಾಂಗ್ರೆಸ್ ನ ಉನ್ನತ ಹುದ್ದೆಗೇರಿರುವುದು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಶಕ್ತಿ ಬಂದಂತಾಗಿದೆ. ಆದ್ರೆ ಯಾದಗಿರಿ ಜಿಲ್ಲಾ ಕಾಂಗ್ರೆಸ್ ನಲ್ಲಿ ತಲೆದೂರಿರುವ ಟಿಕೆಟ್ ಗಾಗಿ ಬಣ ಬಡಿದಾಟಬಲವನ್ನ ಕಂಟ್ರೋಲ್ ಮಾಡುವ ಸವಾಲು ಕೂಡ ಇರುವಂತದ್ದು. ಈಗಾಗಲೆ ಕಾಂಗ್ರೆಸ್ ದೇಶದಲ್ಲಿ ಬಹಳಷ್ಡು ಕಷ್ಟದ ದಿನಗಳನ್ನು ಕಳೆಯುತ್ತಿದೆ. ನರೇಂದ್ರ ಮೋದಿ ಓಡುವ ಕುದರೆಯನ್ನು ಕಟ್ಟಿ ಹಾಕುವುದು ದೊಡ್ಡ ಸವಾಲೇ ಆಗಿದೆ. ಆದ್ರೆ ಮಲ್ಲಿಕಾರ್ಜುನ ಖರ್ಗೆ ದೇಶದಲ್ಲಿ ಕಾಂಗ್ರೆಸ್ ನ್ನು ಯಾವ ರೀತಿಯಲ್ಲಿ ಪುಟಿದೇಳುವಂತೆ ಮಾಡ್ತಾರೆ ಎಂಬುದು ನೋಡಬೇಕಾಗಿದೆ.

Latest Videos
Follow Us:
Download App:
  • android
  • ios