
ಮೋದಿಯನ್ನ ಮಣಿಸೋಕೆ ವಿಪಕ್ಷಗಳ ಗೇಮ್ ಪ್ಲಾನ್: ಜೆಡಿಎಸ್ ನಡೆ ಯಾರ ಕಡೆ..?
ಮೋದಿಯನ್ನ ಮಣಿಸೋಕೆ ವಿಪಕ್ಷಗಳ ಗೇಮ್ ಪ್ಲಾನ್
ಅಮವಾಸ್ಯೆಯಂದು ವಿಪಕ್ಷಗಳ ಮಹಾಮೀಟಿಂಗ್
ವಿಪಕ್ಷಗಳ ಸ್ಟ್ರಾಟಜಿ ಗೇಮಿಗೆ ಬೆಂಗಳೂರಲ್ಲೇ ವೇದಿಕೆ
ಲೋಕಸಭಾ ಚುನಾವಣೆಗೆ(Loksabha Election) ಭರದ ಸಿದ್ಧತೆ ಎಲ್ಲಾ ಪಕ್ಷಗಳಿಂದ ಶುರುವಾಗಿದೆ. ವಿಪಕ್ಷಗಳದ್ದು ಒಂದೇ ಒಂದು ಗುರಿ. ಮೋದಿಯನ್ನ ಸೋಲಿಸಬೇಕು. ಸೋಲಿಸಿ ಮನೆಗೆ ಕಳಿಸಬೇಕು ಅನ್ನೋದು. ಆದ್ರೆ ಮೋದಿಯನ್ನ(PM Modi) ಏಕಾಂಗಿಯಾಗಿ ಎದುರಿಸೋ ಶಕ್ತಿ ಯಾವ ಪಕ್ಷಗಳಿಗೂ ಇದ್ದಂತೆ ಕಾಣಿಸುತ್ತಿಲ್ಲ. ಭಾರತದ ರಾಜಕಾರಣದ ಮೋದಿ ಅನ್ನೋ ಹೆಮ್ಮರವನ್ನ ಬೀಳಿಸೋಕೆ ಮತ್ತೆ ಮಹಾಘಟಬಂಧನ (Mahaghatabandhan) ಅನ್ನೋ ಕೊಡಲಿಯನ್ನ ಮಸೀಯಲಾಗ್ತಿದೆ. ಇದಕ್ಕೆ ಪೂರಕವಾಗಿ ನಮ್ಮ ಬೆಂಗಳೂರಿನಲ್ಲೇ(bengaluru) ಮೀಟಿಂಗ್ ಆಗ್ತಿದೆ. ಮೋದಿ ಅವಧಿಯನ್ನ ಈ ಬಾರಿ ಸಮಾಪ್ತಿ ಮಾಡಬೇಕು ಅನ್ನೋದು ವಿಪಕ್ಷಗಳ ಏಕಮಾತ್ರ ಗುರಿ. ಮೋದಿ ಯಶಸ್ವಿಯಾಗಿ ಎರಡನೇ ಅವಧಿಯನ್ನ ಮುಗಿಸೋ ಹಂತದಲ್ಲಿದ್ದಾರೆ. ಮೂರನೇ ಬಾರಿ ಭಾರತದ ಗದ್ದುಗೆ ಏರೋ ಅದಮ್ಯ ಆತ್ಮವಿಶ್ವಾಸ ಮೋದಿಯಲ್ಲಿ ಕಾಣಿಸ್ತಾ ಇದೆ. ಈ ಹೊತ್ತಲ್ಲೇ ವಿಪಕ್ಷಗಳ ಸ್ನೇಹಕೂಟ ಹಿಗ್ಗಿಸೋ ಸಂಭ್ರಮವೂ ಶುರುವಾಗಿದೆ.
ಇದನ್ನೂ ವೀಕ್ಷಿಸಿ: ಬಿಜೆಪಿ-ಜೆಡಿಎಸ್ ಮೈತ್ರಿ: ಯಾರಿಗೆ ಲಾಭ..? ಯಾರಿಗೆ ನಷ್ಟ..?