ದಾವಣಗೆರೆ ಕಾಂಗ್ರೆಸ್‌ನಲ್ಲಿ ಲೋಕಸಭೆ ಟಿಕೆಟ್ ಫೈಟ್: ಶಾಸಕರು, ಸಚಿವರ ಮಧ್ಯೆ ಕಾವೇರಿದ ಟಾಕ್‌ವಾರ್
ಲೋಕಸಭೆ ಎಲೆಕ್ಷನ್ ಘೋಷಣೆಗೂ ಮುನ್ನವೇ ದಾವಣಗೆರೆಯಲ್ಲಿ ಕಾವು ಹೆಚ್ಚಾಗಿದೆ. ಒಂದೇ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಸಚಿವರು,ಶಾಸಕರ ಮಧ್ಯೆ ಟಾಕ್‌ವಾರ್ ಜೋರಾಗಿದೆ. ನನಗೆ ಟಿಕೆಟ್ ಸಿಗುತ್ತೆ ಅಂತಾ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಓಡಾಟನೂ ಶುರುಮಾಡಿದ್ದಾರೆ. ಆದ್ರೆ ಚನ್ನಗಿರಿ ಶಾಸಕ ಹೇಳಿದ ಒಂದು ಮಾತು ಸಚಿವ ಶಾಮನೂರು ಫ್ಯಾಮಿಲಿಗೆ ಆಕ್ರೋಶ ತಂತಿದೆ.
ದಾವಣಗೆರೆ ಲೋಕಸಭೆ ಎಲೆಕ್ಷನ್ ಕಾವು ದಿನದಿನಕ್ಕೂ ಜೋರಾಗ್ತಿದೆ. ಒಂದೇ ಟಿಕೆಟ್‌ಗೆ ಒಂದೇ ಪಕ್ಷದ ಇಬ್ಬರ ಮಧ್ಯೆ ಮಾತಿನ ಕಾಳಗ ಜೋರಾಗಿದೆ. ಕಾಂಗ್ರೆಸ್‌ನಿಂದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧಿಸ್ತಾರೆ ಎಂಬ ಚರ್ಚೆ ಶುರುವಾಗಿದೆ. ಅವರು ಕೂಡ ಕ್ಷೇತ್ರದಲ್ಲಿ ಬಿರುಸಿನ ಓಡಾಟ ಶುರುಮಾಡಿದ್ದು ನಾನೇ ಅಭ್ಯರ್ಥಿ ಆಗ್ತೀನಿ ಅನ್ನೋ ಮಾತುಗಳನ್ನಾಡಿದ್ರು..ಆದ್ರೆ ಈಗ ಚನ್ನಗಿರಿ ಶಾಸಕ ಶಿವಗಾಂಗ ಬಸವರಾಜ್ ಹೇಳಿದ ಮಾತು ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಎಸ್.ಎಸ್ ಮಲ್ಲಿಕಾರ್ಜುನ್ (S.S. Mallikarjun) ಪತ್ನಿ ಸ್ಪರ್ಧಿಸೋದು ಅನುಮಾನ ಎಂದ ಶಾಸಕ ಶಿವಗಂಗಾ ಬಸವರಾಜ್ ದಾವಣಗೆರೆಯಲ್ಲಿ(Davanagere) ಹೊಸಬರಿಗೆ ಟಿಕೆಟ್ ಕೊಟ್ರೆ ಒಳ್ಳೇಯದು ಅಂದ್ರು..ಅಲ್ದೆ ಇನ್‌ಸೈಟ್ ಆಕಾಡೆಮಿ ವಿನಯ್ ಕುಮಾರ್ ಸ್ಪರ್ಧಿಸಿದ್ರೆ ನನ್ನ ಬೆಂಬಲ ಇದೆ ಅಂತಾ ಹೇಳಿದ್ರು..ಈ ಮಾತಿಗೆ ಕೆರಳಿದ ಸಚಿವ ಮಲ್ಲಿಕಾರ್ಜುನ್ ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಗೆ ಮಣೆ ಹಾಕುತ್ತೆ ಅಂದ್ರು.ಅಷ್ಟೇ ಅಲ್ಲ ಕಾಳಪ್ಪ ಯಾರು ಬೋಳಪ್ಪ ಯಾರು ಅಂತ ಗುರುತಿಸಬೇಕು. ಎಲ್ಲಿಂದಲೋ ಬಂದು ಯಾರಿಗೋ ಟಿಕೆಟ್(Ticket) ಕೊಟ್ರೆ ಆಗೋಲ್ಲ ಅಂತಾ ಪರೋಕ್ಷವಾಗಿ ಶಾಸಕರ ಮಾತಿಗೆ ಸಚಿವರು ಆಕ್ರೋಶ ಹೊರಹಾಕಿದ್ರು. ಬಿಜೆಪಿಯಲ್ಲಿ(BJP) ನಾನು ಟಿಕೆಟ್ ಆಕಾಂಕ್ಷಿ ಎಂದು ರೇಣುಕಾಚಾರ್ಯ ಓಡಾಡ್ತಿದ್ದಾರೆ. ಇತ್ತ ಕಾಂಗ್ರೆಸ್ನಲ್ಲಿ ಶಾಮನೂರು ಸೊಸೆ ನನಗೆ ಟಿಕೆಟ್ ಸಿಗುತ್ತೆ ಅಂತಾ ಕ್ಷೇತ್ರದಲ್ಲಿ ಎಲೆಕ್ಷನ್ ಘೋಷಣೆಗೂ ಮುನ್ನವೇ ಕ್ಯಾಂಪೇನ್ ಶುರುಮಾಡಿದ್ದಾರೆ. ಕಾಂಗ್ರೆಸ್ ಟಿಕೆಟ್ ವಿಚಾರದಲ್ಲಿ ಶಾಸಕರು-ಸಚಿವರ ಮಧ್ಯೆ ಟಾಕ್ವಾರ್ ಬೇರೆ ಶುರುವಾಗಿದ್ದು, ದಾವಣೆಗೆರೆ ಲೋಕಸಭೆ ರಣಕಣ ಕಿಕ್ಕೇರಿಸಿದೆ.
ಇದನ್ನೂ ವೀಕ್ಷಿಸಿ: ಹಮಾಸ್ ಉಗ್ರರ ದಾಳಿಗೆ ರಕ್ತಸಿಕ್ತವಾಯ್ತು ಇಸ್ರೇಲ್: 2005ರಿಂದಲೂ ಧಗಧಗಿಸುತ್ತಲೇ ಇದೆ ದ್ವೇಷದ ಜ್ವಾಲೆ..!