14ರ ಉತ್ತರ ಚಕ್ರವ್ಯೂಹದಲ್ಲಿ ಅಡಗಿದೆ ಮಿಲಿಯನ್ ಡಾಲರ್ ರಹಸ್ಯ: ಹೆಚ್ಚು ವೋಟಿಂಗ್ನಿಂದ ಯಾರಿಗೆ ಲಾಭ..? ಯಾರಿಗೆ ನಷ್ಟ..?

ಉಳಿದ 14 ಕ್ಷೇತ್ರಗಳಲ್ಲಿ ಮುಗಿಯಿತು ಮತಯುದ್ಧ.. ಶುರು ಸೋಲು-ಗೆಲುವಿನ ಲೆಕ್ಕಾಚಾರ..! ವೋಟಿಂಗ್ ಪರ್ಸಂಟೇಜ್ ಹೆಚ್ಚಾಯ್ತು ಯಾರಿಗೆ ಪ್ಲಸ್..? ಯಾರಿಗೆ ಮೈನಸ್..? 14ರ ಉತ್ತರ ಚಕ್ರವ್ಯೂಹದಲ್ಲಿ ಅಡಗಿದೆ ಮಿಲಿಯನ್ ಡಾಲರ್ ರಹಸ್ಯ..! 
 

First Published May 10, 2024, 2:57 PM IST | Last Updated May 10, 2024, 2:57 PM IST

ಉಳಿದ 14 ಕ್ಷೇತ್ರಗಳಲ್ಲಿ ಮುಗಿಯಿತು ಮತಯುದ್ಧ.. ಶುರು ಸೋಲು-ಗೆಲುವಿನ ಲೆಕ್ಕಾಚಾರ..! ವೋಟಿಂಗ್ ಪರ್ಸಂಟೇಜ್ ಹೆಚ್ಚಾಯ್ತು ಯಾರಿಗೆ ಪ್ಲಸ್..? ಯಾರಿಗೆ ಮೈನಸ್..? 14ರ ಉತ್ತರ ಚಕ್ರವ್ಯೂಹದಲ್ಲಿ ಅಡಗಿದೆ ಮಿಲಿಯನ್ ಡಾಲರ್ ರಹಸ್ಯ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಉತ್ತರ ಮತ ಲೆಕ್ಕ. ಕರ್ನಾಟಕದ ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧದ 2ನೇ ಅಧ್ಯಾಯ ಮುಗಿದಿದೆ. ಅಂದ್ರೆ ಲೋಕಸಭಾ ಚುನಾವಣೆಯ ಸೆಕೆಂಡ್ ರೌಂಡ್ ಮುಕ್ತಾಯವಾಗಿದ್ದು, ಚುನಾವಣಾ ಫಲಿತಾಂಶಕ್ಕಾಗಿ ಎಲ್ಲರೂ ಕಾಯ್ತಿದ್ದಾರೆ.. 2ನೇ ಹಂತದ 14 ಕ್ಷೇತ್ರಗಳಲ್ಲಿ ಈ ಬಾರಿ ಹೆಚ್ಚಿನ ಮತದಾನವಾಗಿದ್ದು ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಈಬಾರಿ ವೋಟಿಂಗ್ ಪರ್ಸಂಟೇಜ್ ಹೆಚ್ಚಾದ ಕಾರಣ ಯಾರಿಗೆ ಪ್ಲಸ್ ಯಾರಿಗೆ ಮೈನಸ್ ಅನ್ನೋ ಟಾಕ್ ಶುರುವಾಗಿದೆ. 

ಹಾಗಾದ್ರೆ ಮತದಾನದ ಪ್ರಮಾಣ ಹೆಚ್ಚಾಗಿರೋದ್ರಿಂದ ಇದ್ರ ಲಾಭ ಪಡೆಯೋದು ಯಾರು..? ಸೋಲು ಮತ್ತು ಗೆಲುವಿನ ಮಧ್ಯೆ ನಿಂತಿರೋ ಈ % ಲೆಕ್ಕದ ಲಾಭ ಯಾರಿಗೆ, ನಷ್ಟ ಯಾರಿಗೆ..? 2ನೇ ಹಂತಲ್ಲಿ ನಡೆದ ಮತದಾನದಲ್ಲಿ, ವೋಟಿಂಗ್ ಪ್ರಮಾಣ ಹೆಚ್ಚಾಗಿರೋದು ಯಾವ ಪಕ್ಷಕ್ಕೆ ಲಾಭ ತಂದು ಕೊಡುತ್ತೆ..? ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಪೈಕಿ 14ರಲ್ಲೂ ಮತದಾನದ ಪ್ರಮಾಣ ಹೆಚ್ಚಾಗಿದೆ. ಇದು ಬಿಜೆಪಿಗೆ ಲಾಭ ಅಂತ ಬಿಜೆಪಿ ನಾಯಕರು ಹೇಳ್ತಾ ಇದ್ರೆ, ಕಾಂಗ್ರೆಸ್'ಗೆ ಲಾಭ ಅಂತ ಕೈ ನಾಯಕರು ವಾದ ಮಂಡಿಸ್ತಾ ಇದ್ದಾರೆ. ಹಾಗಾದ್ರೆ ಏನಿದು ವೋಟಿಂಗ್ ಪರ್ಸಂಟೇಜ್ ಲೆಕ್ಕಾಚಾರ.14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾನದ ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಲಿದೆ.