KS Eshwarappa: ಮೋದಿ ಭಾವಚಿತ್ರಕ್ಕಾಗಿ ಕೋರ್ಟ್ ಮೊರೆ ಹೋದ ಈಶ್ವರಪ್ಪ! ಮುಂಜಾಗ್ರತ ಕ್ರಮವಾಗಿ ಕೆವಿಯಟ್ ಸಲ್ಲಿಕೆ

ಮೋದಿ ಭಾವಚಿತ್ರಕ್ಕಾಗಿ ಕೋರ್ಟ್ ಮೊರೆ ಹೋದ ಈಶ್ವರಪ್ಪ!
ಕೋರ್ಟ್‌ನಲ್ಲಿ ಮೋದಿ ಭಾವಚಿತ್ರಕ್ಕಾಗಿ ಕೆವಿಯಟ್ ಸಲ್ಲಿಕೆ
ಕಾನೂನಾತ್ಮಕವಾಗಿ ತಡೆಯಲು ಪ್ರಯತ್ನಿಸಿದಂತೆ ಕೇವಿಯಟ್

First Published Apr 6, 2024, 12:02 PM IST | Last Updated Apr 6, 2024, 12:03 PM IST

ಶಿವಮೊಗ್ಗದಿಂದ ಕೆ.ಎಸ್. ಈಶ್ವರಪ್ಪ(KS Eshwarappa) ಬಂಡಾಯ ಸ್ಪರ್ಧೆ ಮಾಡಲು ನಿರ್ಧರಿಸಿದ್ದು, ಪ್ರಧಾನಿ ಮೋದಿ(Narendra Modi) ಭಾವಚಿತ್ರಕ್ಕಾಗಿ ಈಶ್ವರಪ್ಪ ಬಿಗ್ ಫೈಟ್ ನಡೆಸುತ್ತಿದ್ದಾರೆ. ಮೋದಿ ಭಾವಚಿತ್ರ ಬಳಸಲು ಅನುಮತಿ ಬೇಕೆಂದು ಕೋರಿದ್ದಾರೆ. ಮೋದಿ ಭಾವಚಿತ್ರಕ್ಕಾಗಿ(Photo) ಕೆ.ಎಸ್‌.ಈಶ್ವರಪ್ಪ ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್‌ನಲ್ಲಿ(Court) ಮೋದಿ ಭಾವಚಿತ್ರಕ್ಕಾಗಿ ಕೆವಿಯಟ್ ಸಲ್ಲಿಕೆ ಮಾಡಿದ್ದಾರೆ. ಕಾನೂನಾತ್ಮಕವಾಗಿ ತಡೆಯಲು ಪ್ರಯತ್ನಿಸಿದಂತೆ ಕೇವಿಯಟ್ ಸಲ್ಲಿಕೆ ಮಾಡಲಾಗಿದೆ. ಭಾರತದ ಪ್ರಧಾನಿಯ ಭಾವಚಿತ್ರವನ್ನು ಉಪಯೋಗಿಸುತ್ತಿದ್ದೇನೆ. ಸಂವಿಧಾನದಲ್ಲಿ  ಪ್ರಧಾನಿ ಭಾವಚಿತ್ರವನ್ನು ಬಳಸಲು ಅವಕಾಶವಿದೆ. ಭಾವಚಿತ್ರದ ವಿರುದ್ಧ ದಾವೇ ಹೂಡಿದರೆ ತಡೆಯಲು ಕ್ರಮ ಕೈಗೊಳ್ಳಲು ಕೋರ್ಟ್‌ನಲ್ಲಿ ಕೆವಿಯಟ್ ಸಲ್ಲಿಕೆ ಮಾಡಲಾಗಿದೆ. ಕೇವಿಯಟ್ ಅವಧಿ 3 ತಿಂಗಳಾಗಿದ್ದು, ಅಷ್ಟರಲ್ಲಿ ಚುನಾವಣೆ ಮುಗಿಯುತ್ತೆ. ಹಾಗಾಗಿ ಯಾರೂ ಕೂಡ ತಡೆಯಾಜ್ಞೆ ತರಲು ಸಾಧ್ಯಯಿಲ್ಲ ಎಂಬುದು ಈಶ್ವರಪ್ಪ ಲೆಕ್ಕಾಚಾರವಾಗಿದೆ.

ಇದನ್ನೂ ವೀಕ್ಷಿಸಿ:  KN Rajanna on Devegowda: ‘ದೇವೇಗೌಡರಿಗೆ ಸಾಯೋ ವಯಸ್ಸಿನಲ್ಲಿ ಹೊಂದಾಣಿಕೆ ರಾಜಕೀಯ ಬೇಕಿತ್ತಾ?’ : ಕೆ.ಎನ್‌.ರಾಜಣ್ಣ