KN Rajanna on Devegowda: ‘ದೇವೇಗೌಡರಿಗೆ ಸಾಯೋ ವಯಸ್ಸಿನಲ್ಲಿ ಹೊಂದಾಣಿಕೆ ರಾಜಕೀಯ ಬೇಕಿತ್ತಾ?’ : ಕೆ.ಎನ್‌.ರಾಜಣ್ಣ

ಮುದ್ದಹನುಮೇಗೌಡ ಪರ ಪ್ರಚಾರದಲ್ಲಿ ಸಚಿವ ರಾಜಣ್ಣ ಹೇಳಿಕೆ
ಅಭ್ಯರ್ಥಿಗಳಿಗಿಂತ ದೇವೇಗೌಡರು -ರಾಜಣ್ಣ ಮಾತಿನದ್ದೇ ಸದ್ದು 
ಅಭ್ಯರ್ಥಿ ಪರ ಪ್ರಚಾರ ಮಾಡುವಾಗ ರಾಜಣ್ಣ ವಿವಾದಾತ್ಮಕ ಮಾತು

First Published Apr 6, 2024, 11:39 AM IST | Last Updated Apr 6, 2024, 11:40 AM IST

ಕಲ್ಪತರು ನಾಡಲ್ಲಿ ದೇವೇಗೌಡರು V/S ರಾಜಣ್ಣ ಟಾಕ್ ಫೈಟ್ ಜೋರಾಗಿದೆ. ಲೋಕಸಭೆ ಎಲೆಕ್ಷನ್(Loksabha Election) ಹೊತ್ತಿನಲ್ಲಿ ಗೌಡರ ಸಾವಿನ ಬಗ್ಗೆ ರಾಜಣ್ಣ ಪ್ರಸ್ತಾಪಿಸಿದ್ದಾರೆ. ದೇವೇಗೌಡರಿಗೆ(Devegowda) ಸಾಯುವ ವಯಸ್ಸಲ್ಲಿ ಹೊಂದಾಣಿಕೆ ಬೇಕಿತ್ತಾ? ಎಂದು ಹೇಳುವ ಮೂಲಕ ಚುನಾವಣೆ ಹೊತ್ತಲ್ಲೇ ರಾಜಣ್ಣ(K.N.Rajanna) ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ವಿಧಾನಸಭೆ ಚುನಾವಣೆಯಲ್ಲೂ ದೇವೇಗೌಡರ ಸಾವಿನ ಬಗ್ಗೆ ಸಚಿವ ರಾಜಣ್ಣ ಪ್ರಸ್ತಾಪಿಸಿದ್ದರು. ಸೋಮಣ್ಣ(V Somanna) ಪರ ಪ್ರಚಾರದ ವೇಳೆ ರಾಜಣ್ಣ ವಿರುದ್ಧ ಗುಡುಗಿದ್ದ ಮಾಜಿಪ್ರಧಾನಿ. 2019ರ ಲೋಕಸಭೆಯಲ್ಲಿ ನನ್ನ ಸೋಲಿಸಿದ್ದು ರಾಜಣ್ಣ ಎಂದು ದೇವೇಗೌಡ್ರು ಹೇಳಿದ್ದರು. ವಾಲ್ಮೀಕಿ ಸಮಾಜದವರು ರಾಜಣ್ಣನ ನಂಬ‌ಬೇಡಿ ಎಂದು ದೇವೇಗೌಡರು ಹೇಳಿದ್ದರು. ದೇವೇಗೌಡರ ಹೇಳಿಕೆಗೆ  ಟಾಂಗ್ ಕೊಡಲು ಹೋಗಿ ಇದೀಗ ರಾಜಣ್ಣ ವಿವಾದ ಹುಟ್ಟುಹಾಕಿದ್ದಾರೆ. ದೇವೇಗೌಡರು, ಎಚ್‌ಡಿಕೆಯನ್ನ ಮುಗಿಸಬೇಕು ಅಂತಾ ಬಿಎಸ್‌ವೈ ಹೇಳಿದ್ರು. ಅಂತವರ ಜತೆ ದೇವೇಗೌಡರು ಅಪವಿತ್ರ ಮೈತ್ರಿ‌ ಮಾಡ್ಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Campaign In Kolar: ಪ್ರಜಾಧ್ವನಿ 2.0 ಹೆಸರಿನಲ್ಲೇ ಕಾಂಗ್ರೆಸ್‌ ಚುನಾವಣಾ ಪ್ರಚಾರ: ಕೋಲಾರದ ಕುರುಡುಮಲೆಯಿಂದ ಕ್ಯಾಂಪೇನ್ ಆರಂಭ