ಮೋದಿಗೆ ಜಯಕಾರ..ಬಿಎಸ್‌ವೈಗೆ ಧಿಕ್ಕಾರ..! ಏನಿದು K S ಈಶ್ವರಪ್ಪ ರಣತಂತ್ರ..?

ಹಳೆ ನೋವು ಕೆದಕಿ ಹೊಸ ಸಂಕಲ್ಪ ತೊಟ್ಟಿದ್ದೇಕೆ..!
ರಾಮ.. ಮೋದಿ.. ಜಪ ಮಾಡಿದ ಈಶ್ವರಪ್ಪ..!
ಶೋಭಾ ಕರಂದ್ಲಾಗೆ ಟಿಕೆಟ್..ಈಶ್ವರಪ್ಪ ಗರಂ..!
 

First Published Mar 17, 2024, 2:12 PM IST | Last Updated Mar 17, 2024, 2:12 PM IST

ಕರ್ನಾಟಕ ಬಿಜೆಪಿಯ ಖಟ್ಟರ್ ಹಿಂದುತ್ವ ಪ್ರತಿಪಾದಿ. ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪನವರು(KS Eshwarappa) ಲೋಕಸಭಾ ಚುನಾವಣೆಯ(Loksabha Election) ಅಭ್ಯರ್ಥಿ ಘೋಷಣೆಯಾದ ಮೇಲೆ ರೆಬಲ್ ಸ್ಟಾರ್ ಆಗಿ ಬದಲಾಗಿದ್ದಾರೆ. ಪುತ್ರ ಕಾಂತೇಶ್ ಅವರಿಗೆ ಹಾವೇರಿ(Haveri) ಟಿಕೆಟ್ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಈಶ್ವರಪ್ಪನವರಿಗೆ ಭ್ರಮನಿರಸನವಾಗಿದೆ. ಹೀಗಾಗಿ ಪಕ್ಷದ ಹಿರಿಯ ನಾಯಕ, ಆಪ್ತಮಿತ್ರ ಬಿ.ಎಸ್. ಯಡಿಯೂರಪ್ಪನವರ(Yediyurappa) ಮೇಲೆ ತಿರುಗಿ ಬಿದ್ದಿದ್ದಾರೆ. ಶಿವಮೊಗ್ಗದಿಂದ(Shivamogga) ಸ್ವತಂತ್ರ್ಯವಾಗಿ ಚುನಾವಣೆ ಎದುರಿಸೋ ಘೋಷಣೆ ಮಾಡಿರೋ ಈಶ್ವರಪ್ಪನವರು ಶಿವಮೊಗ್ಗದಲ್ಲಿ ಹೊಸ ಚರಿತ್ರೆ ಬರೆಯೋ ಸಂಕಲ್ಪ ತೊಟ್ಟಿದ್ದಾರೆ. ಲೋಕಸಭಾ ಚುನಾವಣೆ ರಂಗು ದಿನೇ ದಿನೇ ಬದಲಾಗ್ತಾ ಇದೆ. ಇವತ್ತಂತೂ ದೇಶದಲ್ಲಿ ಯಾವಾಗ ಮಹಾಲೋಕಸಮರದ ಮುಹೂರ್ತ ಅನ್ನೋದು ಘೋಷಣೆಯಾಗಿದೆ. ಕರ್ನಾಟಕದಲ್ಲಿ(Karnataka) ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 26 ಹಾಗೂ ಮೇ 7 ರಂದು ಕರ್ನಾಟಕದ 28 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಎಲ್ಲಾ ಪಕ್ಷಗಳಿಗೂ ಒಂದೇ ಗುರಿ..ಒಂದೇ ಸಂಕಲ್ಪ. ಅತ್ಯುತ್ತಮ ಪ್ರದರ್ಶನ ನೀಡಿ ತಮ್ಮ ಪಕ್ಷವನ್ನ , ತಮ್ಮ ಸುಪ್ರೀಂ ಲೀಡರ್‌ನನ್ನ ಅಧಿಕಾರದಲ್ಲಿ ಕೂರಿಸಬೇಕು ಅನ್ನೋದು. ಕರ್ನಾಟಕದಲ್ಲಿ ಬಿಜೆಪಿ(BJP) ತನ್ನ 20 ಅಭ್ಯರ್ಥಿಗಳ ಹೆಸರನ್ನ ಅಂತಿಮ ಮಾಡಿದ್ರೆ ಕಾಂಗ್ರೆಸ್ 7 ಕ್ಯಾಂಡಿಡೇಟ್ ಇವರೇ ಅಂತ ಫೈನಲ್ ಮಾಡಿದೆ. ಆದ್ರೆ ಬಿಜೆಪಿಯಲ್ಲಿ ಬಂಡಾಯದ ಬೇಗೆ ಶುರುವಾಗಿದೆ. ಇದೊಂದು ಬಂಡಾಯ ಬಾವುಟ ಹಾರ್ತಾ ಇರೋದು ಬೇರೆ ಎಲ್ಲೂ ಅಲ್ಲ, ಕರ್ನಾಟಕ ಬಿಜೆಪಿಯ ಮೇನ್ ಲೀಡರ್, ಮಾಜಿ ಸಿಎಂ ಯಡಿಯೂರಪ್ಪನವರ ಸ್ವಕ್ಷೇತ್ರ ಶಿವಮೊಗ್ಗದಲ್ಲಿ.

ಇದನ್ನೂ ವೀಕ್ಷಿಸಿ:  ಆಸ್ತಿಗಾಗಿ ತಂದೆಯನ್ನೇ ಗೃಹ ಬಂಧನದಲ್ಲಿಟ್ಟ ಪಾಪಿ ಮಕ್ಕಳು! ಕಂಪನಿ ಮಾಲೀಕನಿಗೆ ಇದೆಂಥಾ ಶಿಕ್ಷೆ ?