Eshwarappa on BSY: ನನ್ನ ಮಗನಿಗೆ ಬಿಎಸ್‌ವೈ ಯಾಕೆ ಟಿಕೆಟ್ ಕೊಡಿಸಲಿಲ್ಲ, ನನಗೆ ಮೋಸ ಮಾಡಿದ್ದಾರೆ: ಕೆ.ಎಸ್ ಈಶ್ವರಪ್ಪ

ಬಿಎಸ್‌ವೈ ಹಠ ಹಿಡಿದು ಕರಂದ್ಲಾಜೆ, ಬೊಮ್ಮಾಯಿಗೆ ಟಿಕೆಟ್ ಕೊಡಿಸಿದ್ದಾರೆ. ಆದ್ರೆ, ನನ್ನ ಮಗನಿಗೆ ಬಿಎಸ್‌ವೈ ಯಾಕೆ ಟಿಕೆಟ್ ಕೊಡಿಸಲಿಲ್ಲ ಎಂದು ಕೆ.ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.

Share this Video
  • FB
  • Linkdin
  • Whatsapp

ಹಾವೇರಿಯಿಂದ ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಟಿಕೆಟ್(Ticket)ಮಿಸ್ ಆಗಿದ್ದು, ಮಾಜಿ ಸಿಎಂ ಯಡಿಯೂರಪ್ಪ(BS Yediyurappa) ವಿರುದ್ಧ ಕೆ.ಎಸ್ ಈಶ್ವರಪ್ಪ(KS Eshwarappa) ಕೆಂಡಾಮಂಡಲವಾಗಿದ್ದಾರೆ. ಕಾಂತೇಶ್‌ಗೆ ಟಿಕೆಟ್ ಕೊಡಿಸದೇ ಬಿಎಸ್‌ವೈ ಮೋಸ ಮಾಡಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ. ಕಾಂತೇಶ್‌ಗೆ ಹಾವೇರಿ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು. ಬಿಎಸ್‌ವೈ ಹಠ ಹಿಡಿದು ಕರಂದ್ಲಾಜೆ, ಬೊಮ್ಮಾಯಿಗೆ ಟಿಕೆಟ್ ಕೊಡಿಸಿದ್ದಾರೆ. ಆದ್ರೆ, ನನ್ನ ಮಗನಿಗೆ ಬಿಎಸ್‌ವೈ ಯಾಕೆ ಟಿಕೆಟ್ ಕೊಡಿಸಲಿಲ್ಲ. ರಾಘವೇಂದ್ರ ವಿರುದ್ಧ ಸ್ಪರ್ಧಿಸಲು ನನ್ನ ಬೆಂಬಲಿಗರು ಹೇಳ್ತಿದ್ದಾರೆ. ನಾನು ಸ್ಪರ್ಧಿಸಬೇಕೋ? ಬೇಡವೋ? ಇನ್ನು ನಿರ್ಧರಿಸಿಲ್ಲ. ಶುಕ್ರವಾರ ಬೆಂಬಲಿಗರ ಸಭೆ ಕರೆದಿದ್ದೇನೆ, ಚರ್ಚಿಸುತ್ತೇನೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: Pratap Simha,: ಟಿಕೆಟ್‌ ತಪ್ಪಿದ್ದು ಯಾಕೆ ಅಂತಾ ನನಗೆ ಗೊತ್ತಾಗ್ತಿಲ್ಲ, ಬಿಎಸ್‌ವೈ ನನಗೆ ಟಿಕೆಟ್‌ ತಪ್ಪಿಸಿಲ್ಲ: ಪ್ರತಾಪ್‌ ಸಿಂಹ

Related Video