ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಪಾರ್ಟಿ ವೇದಿಕೆ, ಹೈಕಮಾಂಡ್‌ನಲ್ಲಿ ಚರ್ಚೆ ಆಗಬೇಕು: ಸತೀಶ್ ಜಾರಕಿಹೊಳಿ
ಸುಮ್ಮನೆ ನಾವು ದಿನ ರಾಜ್ಯದ ತುಂಬಾ ಡಿಸಿಎಂ ಚರ್ಚೆ ಮಾಡುವ ಬದಲು ಪಕ್ಷದ ವೇದಿಕೆಯಲ್ಲಿ ಆಗಬೇಕು.ಮತಗಳನ್ನು ತಂದು ಕೊಡುವವರು ಅಧ್ಯಕ್ಷರಾಗಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ: ಕೆಪಿಸಿಸಿ ಅಧ್ಯಕ್ಷರು (KPCC President) ಬದಲಾವಣೆ ಆಗ್ತಾರಾ ಎಂಬ ಪ್ರಶ್ನೆಗೆ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಪ್ರತಿಕ್ರಿಯಿಸಿದ್ದು, ಪಾರ್ಟಿ ವೇದಿಕೆ, ಹೈಕಮಾಂಡ್‌ನಲ್ಲಿ(high command) ಈ ಬಗ್ಗೆ ಚರ್ಚೆ ಆಗಬೇಕು. ಬಹಳಷ್ಟು ಜನ ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ನಿರ್ಣಯ ಮಾಡಬೇಕು. ಆದರೆ ಕೆಪಿಸಿಸಿ ಅಧ್ಯಕ್ಷರಾಗುವ ವಿಚಾರ ಸದ್ಯ ನಮ್ಮ ಮುಂದೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಚುನಾವಣೆ ಇಲ್ಲ ಮತಗಳನ್ನು ತಂದು ಕೊಡುವವರು ಅಧ್ಯಕ್ಷರಾಗಬೇಕು. ಅಂತಹ ಯಾವುದೇ ಚರ್ಚೆ ಆಗಿಲ್ಲ. ದೆಹಲಿ ಭೇಟಿ ವಿಚಾರ ಬೇರೆ ಇದೆ. ಬೇರೆ ಬೇರೆ ಕೆಲಸಗಳಿಗೆ ನಾವು ಭೇಟಿ ಆಗಿದ್ದೇವೆ. ಪ್ರಧಾನಿಗೆ ಸಿಎಂ ಅವರು ಭೇಟಿ ಆಗಿದ್ದಾರೆ, ಹೋದಾಗ ರಾಜಕೀಯ ಚರ್ಚೆ ಆಗಿರುತ್ತದೆ. ಒಳಗೆ ಯಾರು ಏನು ಹೇಳಿದರು ಎಂದು ಅವರಿಗೆ ಮಾತ್ರ ಗೊತ್ತಿರುತ್ತೆ. ಪ್ಲಾನಿಂಗ್ ಎನೂ ಇಲ್ಲ ನೆಗೆಟಿವ್ ಇದ್ದಿದ್ದನ್ನು ಪಾಸಿಟಿವ್ ಮಾಡಬೇಕು. ಅದು ಒಂದು ಕಲೆ ಎಂದರು.
ಇದನ್ನೂ ವೀಕ್ಷಿಸಿ: ರೀಲ್ಸ್‌ಗಾಗಿ ಶೋಕಿ ಮಾಡಿದವನಿಗೆ ಜೈಲೂಟ ! ಶೋ ಕೊಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್!