ರೀಲ್ಸ್‌ಗಾಗಿ ಶೋಕಿ ಮಾಡಿದವನಿಗೆ ಜೈಲೂಟ ! ಶೋ ಕೊಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್!

ಅರುಣ್ ಕಟಾರೆ ಎಂಬ ಯುವಕ ರೀಲ್ಸ್‌ಗಾಗಿ ಶೋ ಕೊಡಲು ಹೋಗಿ ಜೈಲು ಸೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 

Share this Video
  • FB
  • Linkdin
  • Whatsapp

ಯುವಕನೊಬ್ಬ ರೀಲ್ಸ್‌ (Reels) ಶೋಗಾಗಿ ಗನ್ ಮ್ಯಾನ್, ದುಬಾರಿ ಕಾರುಗಳು, ಬಾಡಿಗಾರ್ಡ್ಸ್ ವಿತ್ ವೆಪನ್ ಜೊತೆ ಮೈಮೇಲೆ ಕೆಜಿಗಟ್ಟಲೆ ಚಿನ್ನ ಹಾಕಿಕೊಂಡು ಶೋಕಿ ಮಾಡಲು ಹೋಗಿ, ಜೈಲು(Jail) ಸೇರಿರುವ ಘಟನೆ ಬೆಂಗಳೂರಿನಲ್ಲಿ(Bengaluru) ನಡೆದಿದೆ. ಅರುಣ್ ಕಟಾರೆ ಎಂಬುವವನನ್ನು ಕೊತ್ತನೂರು ಪೊಲೀಸರು ಬಂಧನ ಮಾಡಿದ್ದು, ಎ ಕೆ 47 ಮಾದರಿಗೆ ನಕಲಿ ಗನ್ ಹಿಡಿದು ರಸ್ತೆಯಲ್ಲಿ ಶೋ ಅಪ್ ಕೊಡುತ್ತಿದ್ದ. ಅರುಣ್ ಕಟಾರೆ ಶೋ ಬೆದರಿದ ಸಾರ್ವಜನಿಕರು ಆತಂಕವನ್ನು ವ್ಯಕ್ತಪಡಿಸಿದ್ದರು. ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸುತ್ತಿದ್ದ ಕೊತ್ತನೂರು ಪೊಲೀಸರು(Police), ಈ ವೇಳೆ ಎ ಕೆ 47 ಹಿಡಿದು ಓಡಾಡುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆ ವಶಕ್ಕೆ ಪಡೆಯಲಾಗಿದೆ. ಆರ್ಮ್ಸ್ ಕಾಯ್ದೆ ಅಡಿ, 290 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ರೀಲ್ಸ್ ಶೋಕಿಗೆ ಬಿದ್ದು ಯುವಕ ಪರಪ್ಪನ ಅಗ್ರಹಾರ(Parappana Agrahara) ಸೇರಿದ್ದಾನೆ.

ಇದನ್ನೂ ವೀಕ್ಷಿಸಿ: ಸುಮ್ಕಿರಿ ಎಂದ ಡಿಸಿಎಂ..ಡೋಂಟ್ ವರಿ ಎಂದ ಸಿಎಂ..! ಸಿಎಂ ಕುರ್ಚಿ ಕಾಳಗಕ್ಕೆ ಕಾವಿಗಳ ನೇರ ಎಂಟ್ರಿ..!

Related Video