Loksabha Eection 2024: ಸುಡುವ ಕೆಂಡವಾದ ಕೋಲಾರ ಟಿಕೆಟ್ ಫೈಟ್! ಈ ಫೈಟ್‌ನಲ್ಲಿ ಗೆಲ್ಲೋರು ಯಾರು? ಹೈಕಮಾಂಡ್ ತೀರ್ಮಾನವೇನು ?
ಕೋಲಾರ ಕಾಂಗ್ರೆಸ್ನಲ್ಲಿ ಎಡ-ಬಲ ರಾಜೀನಾಮೆ ಡ್ರಾಮಾ
2 ಬಣಗಳ ಗಲಾಟೆಯಲ್ಲಿ 3ನೇಯವರಿಗೆ ಆಗುತ್ತಾ ಲಾಭ..?
ಅವರನ್ ಬಿಟ್..ಇವರನ್ ಬಟ್..3ನೇಯವರಿಗೆ ಟಿಕೆಟ್..?
ಕಾಂಗ್ರೆಸ್ ಕೋಲಾರ ಟಿಕೆಟ್ ಕಗ್ಗಂಟು ಸೌಧದಲ್ಲಿ ಹೈಡ್ರಾಮಾ
ಎರಡು ಬಣಗಳ ಭಿನ್ನತೆ ವಿಧಾನ ಸೌಧದವರೆಗೂ ಬಂದು ನಿಂತಿದೆ. ಹೇಗಾದ್ರು ಮಾಡಿ ಮುನಿಯಪ್ಪನವರ ಕುಟುಂಬಕ್ಕೆ ಟಿಕೆಟ್ ಕೊಡಿಸಬಾರದೆಂಬ ಜಿದ್ದಿಗೆ ರಮೇಶ್ ಕುಮಾರ್ ಅವರ ಬಣ ಬಿದ್ದಂತಿದೆ. ಹೀಗಾಗಿ ರಮೇಶ್ ಕುಮಾರ್(Ramesh Kumar) ಬೆಂಬಲಿಗರೆಲ್ಲ ಒಟ್ಟುಗೂಡಿ, ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡುತ್ತೇವೆಂದು ಹೇಳಿ ವಿಧಾನಸೌಧಕ್ಕೆ ಬಂದಿದ್ದರು. ಆದ್ರೆ ಅದೊಂದು ರಾಜೀನಾಮೆ ಡ್ರಾಮಾವಾಗಿ ಅಂತ್ಯವಾದಂತಿದೆ. ಆದರೂ ಸಹ ಕೋಲಾರ(Kolar) ಟಿಕೆಟ್ ಹಂಚಿಕೆ ಬಿಕ್ಕಟ್ಟು ಈಗ ಮತ್ತಷ್ಟು ಬಿಗಿಯಾದಂತೆನೇ ಕಾಣುತ್ತಿದೆ. ಮುನಿಯಪ್ಪನವರ(KH Muniyappa) ಅಳಿಯನಿಗೆ ಟಿಕೆಟ್(Ticket) ತಪ್ಪಿಸುವ ಸಲುವಾಗಿ, ಅವರ ವಿರೋಧಿ ಬಣ ಎಡಗೈ-ಬಲಗೈಗಳ ಲೆಕ್ಕಾಚಾರ ಶುರುವಿಟ್ಟುಕೊಂಡಿದೆ. ಇಡೀ ಜಿಲ್ಲೆಯಲ್ಲಿ ಎಡಗೈಗಿಂತ ಬಲಗೈನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಎಡಗೈ ಆದ ಮುನಿಯಪ್ಪವರ ಕುಟುಂಬಕ್ಕೆ ಟಿಕೆಟ್ ಕೊಡಕೂಡದೆಂದು ಅವರ ವಿರೋಧಿ ಬಣ ಬೇಡಿಕೆ ಇಟ್ಟಿದೆ. ಒಂದು ವೇಳೆ ಬಲಗೈ ಬಣಕ್ಕೆ ಕೊಡಲು ಸಾಧ್ಯವೇ ಇಲ್ಲ ಅನ್ನೋದಾದ್ರೆ, ತಾವು ಎಡಗೈ ಬಣಕ್ಕೆ ಕೊಟ್ಟರೂ ಸಹ ಮುನಿಯಪ್ಪನವರ ಕುಟುಂಬದ ಹೊರಗಿನವರಿಗೆ ಟಿಕೆಟ್ ಕೊಡಿ ಎಂದು ವಾದವನ್ನು ಮುಂದಿಟ್ಟಾರೆ.
ಇದನ್ನೂ ವೀಕ್ಷಿಸಿ: ರಾಷ್ಟ್ರ ರಾಜಕಾರಣಕ್ಕೆ ತಿರುವು ಕೊಟ್ಟ 1975ರ ತುರ್ತು ಪರಿಸ್ಥಿತಿ..! ಅಮ್ಮ-ಮಗ ಹೆಣೆದ ಬಲೆಯಲ್ಲಿ ವಿಲ ವಿಲ ಒದ್ದಾಡಿತ್ತು ಭಾರತ..!