Asianet Suvarna News Asianet Suvarna News

ಮಾಜಿ‌ ಸಚಿವ ಸುಧಾಕರ್ ಗೆ ಸರ್ಕಾರ ಮತ್ತೊಂದು ಶಾಕ್!

ಆರೋಗ್ಯ ಇಲಾಖೆಯಲ್ಲಿನ ತನಿಖೆ ಬೆನ್ನೆಲ್ಲೆ‌  ಮಾಜಿ‌ ಸಚಿವ ಸುಧಾಕರ್ ಗೆ ಸರ್ಕಾರ ಮತ್ತೊಂದು ಶಾಕ್ ಎದುರಾಗಿದೆ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರತ್ಯೇಕ ಮಾಡಿದ್ದ ಆದೇಶ ವಾಪಸ್ ಪಡೆಯಲಾಗಿದೆ.

First Published Jun 28, 2023, 7:57 PM IST | Last Updated Jun 28, 2023, 7:58 PM IST

ಬೆಂಗಳೂರು (ಜೂ.28): ಆರೋಗ್ಯ ಇಲಾಖೆಯಲ್ಲಿನ ತನಿಖೆ ಬೆನ್ನೆಲ್ಲೆ‌  ಮಾಜಿ‌ ಸಚಿವ ಸುಧಾಕರ್ ಗೆ ಸರ್ಕಾರ ಮತ್ತೊಂದು ಶಾಕ್ ಎದುರಾಗಿದೆ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರತ್ಯೇಕ ಮಾಡಿದ್ದ ಆದೇಶ ವಾಪಸ್ ಪಡೆಯಲಾಗಿದೆ. ಕಳೆದ ವರ್ಷ ಅಷ್ಟೆ ಬಿಜೆಪಿ ಸರ್ಕಾರ ಕೋಲಾರ- ಚಿಕ್ಕಬಳ್ಳಾಪುರ ‌ಹಾಲು ಒಕ್ಕೂಟದಿಂದ ವಿಭಜನೆ ಮಾಡಿತ್ತು. ಕೋಚಿಮುಲ್ ನಿಂದ ಚಿಮೂಲ್  ಆಗಿ ವಿಭಜನೆ ಆಗಿತ್ತು. ವಿಭಜನೆ ವಿರೋಧಿಸಿ ಕೆಲವು ಕಾಂಗ್ರೆಸ್ ನಿರ್ದೇಶಕರು ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು‌ ಆದೇಶ ಮಾತ್ರ ಬಾಕಿ ಇತ್ತು. ಆದೇಶ ಹೋರಬೀಳುವ ಮುನ್ನವೇ ಸರ್ಕಾರದಿಂದ ಪ್ರತ್ಯೇಕ ಹಾಲು‌ ಒಕ್ಕೂಟ  ಆದೇಶ ವಾಪಸ್ ಆಗಿದೆ. ಸಹಕಾರ ಇಲಾಖೆಯ ಜಂಟಿ ನಿಬಂಧಕರಿಂದ ಈ ಪ್ರಕಟಣೆ ಹೊರಬಿದ್ದಿದೆ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರದ್ದುಪಡಿಸಿ, ಕೋಲಾರ ಒಕ್ಕೂಟದಲ್ಲೆ ಮುಂದುವರಿಯಲು ಆದೇಶ ಮಾಡಲಾಗಿದೆ.

Video Top Stories