Campaign In Kolar: ಪ್ರಜಾಧ್ವನಿ 2.0 ಹೆಸರಿನಲ್ಲೇ ಕಾಂಗ್ರೆಸ್ ಚುನಾವಣಾ ಪ್ರಚಾರ: ಕೋಲಾರದ ಕುರುಡುಮಲೆಯಿಂದ ಕ್ಯಾಂಪೇನ್ ಆರಂಭ
ವಿಧಾನಸಭೆ ಚುನಾವಣೆ ಮಾದರಿಯಲ್ಲೇ ಏ.6ರಿಂದ ಕೋಲಾರದ ಕುರುಡುಮಲೆಯಿಂದ ಚುನಾವಣಾ ಪ್ರಚಾರ ಆರಂಭಿಸಲು ರಾಜ್ಯ ಕಾಂಗ್ರೆಸ್ ಮುಂದಾಗಿದೆ.
ಲೋಕಸಭಾ ಚುನಾವಣೆಗೆ ಇಂದಿನಿಂದ ಕಾಂಗ್ರೆಸ್(Congress) ಪ್ರಚಾರವನ್ನು ಆರಂಭಿಸಲಿದೆ. ಸಿಎಂ ಸಿದ್ದರಾಮಯ್ಯ(Siddaramaiah) ಕೋಲಾರಕ್ಕೆ ತೆರಳಿದ್ದು, ಕುರುಡುಮಲೆ( Kurudumale) ಗಣೇಶನಿಗೆ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಮುಳಬಾಗಿಲಿನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಶಿವಕುಮಾರ್(Dk Shivakumar) ಸೇರಿ ಎಲ್ಲಾ ಸಚಿವರೂ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಲಿದ್ದಾರೆ. ಮೊದಲ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಸಿಎಂ, ಡಿಸಿಎಂ ಪ್ರಚಾರ(Campaign In Kolar) ನಡೆಸಲಿದ್ದಾರೆ. ಪ್ರಜಾಧ್ವನಿ 2.0 ಹೆಸರಿನಲ್ಲೇ ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ.
ಇದನ್ನೂ ವೀಕ್ಷಿಸಿ: DK Shivakumar: ಚುನಾವಣೆ ಬಳಿಕ ಡಿಕೆಶಿಗೆ ಡಿಸಿಎಂ, ಅಧ್ಯಕ್ಷ ಸ್ಥಾನ ಹೋಗುತ್ತಾ? ಡಿ.ಕೆ. ಶಿವಕುಮಾರ್‌ಗೆ ಸಿಗುತ್ತಾ ಸಿಎಂ ಸ್ಥಾನ?