News Hour: ವರ್ಗಾವಣೆ ದಂಧೆಗೆ ಎಚ್‌ಡಿಕೆ ಪೆನ್‌ಡ್ರೈವ್ ಸಾಕ್ಷ್ಯ, ಸಿದ್ದು ಸರ್ಕಾರಕ್ಕೆ ಸವಾಲಾದ 'ದಳಪತಿ'
ಸರ್ಕಾರದ ವಿರುದ್ಧ ದಿನಕ್ಕೊಂದು ಸಿಡಿಗುಂಡು ಎಸೆಯುತ್ತಿರುವ ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ, ಬುಧವಾರ ಸದನಕ್ಕೆ ಪೆನ್‌ಡ್ರೈವ್ ಸಾಕ್ಷ್ಯದೊಂದಿಗೆ ಬಂದರು. ಆ ಮೂಲಕ ದಾಖಲೆ ಕೊಡಿ ಎಂದು ಸವಾಲ್ ಹಾಕುತ್ತಿದ್ದ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಜು.5): ಕಾಂಗ್ರೆಸ್ ಸರ್ಕಾರದ ವಿರುದ್ಧ ದಿನಕ್ಕೊಂದರಂತೆ ಭ್ರಷ್ಟಾಚಾರದ ಆರೋಪ ಮಾಡಿರುವ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ, ಬುಧವಾರ ಪೆನ್‌ಡ್ರೈವ್ ಸಾಕ್ಷ್ಯದೊಂದಿಗೆ ಸದನಕ್ಕೆ ಆಗಮಿಸಿದರು. ಅದರೊಂದಿಗೆ ಹೊಸ ಸರ್ಕಾರದಲ್ಲಿ ವರ್ಗಾವಣೆಗೆ 10 ಕೋಟಿ ಫಿಕ್ಸ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ವರ್ಗಾವಣೆ ದಂಧೆ ಹೆಸರಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ವಾಕ್ಸಮರ್ ಜೋರಾಗಿದೆ. ಏಕಾಂಗಿಯಾಗಿ ಸರ್ಕಾರದ ಮೇಲೆ ಮುಗಿಬಿದ್ದಿರುವ ಕುಮಾರಸ್ವಾಮಿ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. 30 ಲಕ್ಷದ ಆರೋಪದ ಬಳಿಕ ಈಗ 10 ಕೋಟಿಯ ಬಾಂಬ್ ಹಾಕಿದ್ದಾರೆ.
Transfer Mafia: ಕಾಂಗ್ರೆಸ್ ವಿರುದ್ಧ ಪೆನ್‌ಡೈವ್ ದಾಖಲೆ ತೋರಿಸಿದ ಕುಮಾರಸ್ವಾಮಿ!
ಇನ್ನೊಂದೆಡೆ, ಕೇಸರಿ ಪಾಳಯದಲ್ಲಿ ವಿಪಕ್ಷ ನಾಯಕನ ಆಯ್ಕೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸತತ ಮೂರನೇ ದಿನವೂ ವಿಪಕ್ಷ ನಾಯಕನಿಲ್ಲದೆ ಸದನ ನಡೆಯಿತು. ವಿಪಕ್ಷ ನಾಯಕನ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಮುತುವರ್ಜಿ ತೋರಿದ್ದಾರೆ ಎನ್ನಲಾಗಿದೆ.