ಕಾಂಗ್ರೆಸ್ ವಿರುದ್ಧ ರೊಚ್ಚಿಗೆದ್ದಿರುವ ಮಾಜಿ ಸಿಎಂ ಹೆಚ್‌ಡಿಕೆ  ದಾಖಲೆ ಸಮೇತ   ಮಾಧ್ಯಮದ ಮುಂದೆ ಬಂದಿದ್ದು, ನನ್ನ ಬಳಿ ಪೆನ್‌ಡೈವ್‌ನಲ್ಲಿ ದಾಖಲೆ ಇದೆ ಎಂದು ಕ್ಯಾಮೆರಾ ಗಳಿಗೆ ಪೆನ್ ಡ್ರೈವ್ ತೋರಿಸಿದ್ದಾರೆ. 

ಬೆಂಗಳೂರು (ಜು.5): ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ನಡೆಯುತ್ತಿರುವ ವರ್ಗಾವಣೆ ದಂಧೆ ಮತ್ತು ಕಾಸಿಗಾಗಿ ಪೋಸ್ಟಿಂಗ್‌ ಬಗ್ಗೆ ಮಾಡಿರುವ ನನ್ನ ಆರೋಪಕ್ಕೆ ಸಂಬಂಧಿಸಿದಂತೆ ನಾನು ದಾಖಲೆ ಕೊಡಲು ಸಿದ್ಧನಿದ್ದೇನೆ. ತನಿಖೆ ನಡೆಸುವ ದಮ್ಮು, ತಾಕತ್ತು ಸರ್ಕಾರಕ್ಕೆ ಇದೆಯೇ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜು.4ರಂದು ನೇರ ಸವಾಲು ಹಾಕಿದ್ದರು. ಇದೀಗ ಬುಧವಾರ ಈ ಬಗ್ಗೆ ಮತ್ತೆ ದಾಖಲೆ ಸಮೇತ ಕುಮಾರಸ್ವಾಮಿ ಮಾಧ್ಯಮದ ಮುಂದೆ ಬಂದಿದ್ದು, ನನ್ನ ಬಳಿ ಪೆನ್‌ಡೈವ್‌ನಲ್ಲಿ ದಾಖಲೆ ಇದೆ ಎಂದು ಕ್ಯಾಮೆರಾ ಗಳಿಗೆ ಪೆನ್ ಡ್ರೈವ್ ತೋರಿಸಿದ್ದಾರೆ. ಈ ಪೆನ್​​ಡ್ರೈವ್​ನಲ್ಲಿ ಓರ್ವ ಸಚಿವರ ಭ್ರಷ್ಟಾಚಾರದ ಆಡಿಯೋ ಕ್ಲಿಪ್ ಇದೆ. ಸಮಯ ಬಂದಾಗ ಪೆನ್​ಡ್ರೈವ್​ ಬಿಡುಗಡೆಗೊಳಿಸುತ್ತೇನೆ ಎಂದಿದ್ದಾರೆ. ಇಂಧನ ಇಲಾಖೆ ಟ್ರಾನ್ಸ್ ಫರ್ ಆಗಿದೆ. 10 ಕೋಟಿಗೆ ಬಿಕರಿಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಧಿವೇಶನ ಬಳಿಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ: ಬಿಎಸ್‌ವೈ

ಇತ್ತೀಚಿಗೆ ಕುಮಾರಸ್ವಾಮಿ ಸಿಎಂ ಕಛೇರಿ ಯಲ್ಲಿ ಶಾಸಕರ ಶಿಫಾರಸು ಪತ್ರ ಇದ್ದರೂ ಲಂಚ ಕೇಳ್ತಿದಾರೆ ಎಂಬ ಆರೋಪ ಮಾಡಿದ್ದರು. 30 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದ ಆಡಿಯೋ ದಾಖಲೆ ಪೆನ್ ಡ್ರೈವ್‌ ನಲ್ಲಿ ಇದೆ ಎನ್ನಲಾಗ್ತಿದೆ.‌

ನಮ್ಮಿಂದ ಬೆಳೆದವರು ನಮ್ಮ ಬಗ್ಗೆಯೇ ಮಾತಾಡ್ತಾರೆ. ಕೆಎಸ್​ಟಿ ಟ್ಯಾಕ್ಸ್ ನಾನು ಇಟ್ಕೊಂಡಿಲ್ಲ. ಮೈತ್ರಿ ಸರ್ಕಾರದ ವೇಳೆ ತಾಜ್ ವೆಸ್ಟ್ ಎಂಡ್ ಹೋಟೆಲ್ ದುಡ್ಡು ಕಟ್ಟಿ ಎಂದು ಬಾಕಿ ಇರುವ ಬಿಲ್ ಕಟ್ಟಲು ಕಾಂಗ್ರೆಸ್​ ಕಚೇರಿಗೆ ಕಳಿಸಿದ್ರಾ? ನಾನೇನು ಬೀದಿಲಿ ಹೋಗೋದಾ? ಎರಡು ಮೂರು ಲಕ್ಷ ಖರ್ಷು ಮಾಡೋ ಯೋಗ್ಯತೆ ನನಗೆ ಇಲ್ವಾ? ಎಂದು ಆಗಿನ ವಿಚಾರವನ್ನು ಕೂಡ ಹೆಚ್‌ಡಿಕೆ ಪ್ರಸ್ತಾಪಿಸಿದ್ದಾರೆ. ನಾನು ಬ್ಲ್ಯೂಪಿಲ್ಮ್ಂ ನ ಟೆಂಟ್ ನಲ್ಲಿ ತೋರಿಸಿ ಬಂದವನಲ್ಲ. ರೌಡಿಗಳಿಗೆ ಎಣ್ಣೆ ಸಪ್ಲೈ ಮಾಡಿಕೊಂಡು ಬಂದವನು ನಾನಲ್ಲ ನನ್ನ ಬಗ್ಗೆ ಮಾತನಾಡಬೇಕಾದ್ರೆ ಎಚ್ಚರ ಇರಲಿ ಎಂದು ಡಿಕೆಶಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಬೆಂಗಳೂರು ಟ್ರಾಫಿಕ್ ಸಮಸ್ಯೆ ಮುಕ್ತಿಗೆ ಸುರಂಗ‌ ನಿರ್ಮಾಣ, ಎಲ್ಲೆಲ್ಲಿ ಬರಲಿದೆ ಸುರಂಗ ರಸ್ತೆ?

ಇನ್ನು, ನಿನ್ನೆ ಇಂಧನ ಇಲಾಖೆಯಲ್ಲಿ 2 ವರ್ಗಾವಣೆಯಾಗಿದೆ, ಒಂದೊಂದು ಪೋಸ್ಟ್ ಗೆ 10 ಕೋಟಿ ಎಂದು HDK ಗಂಭೀರ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಇಂಧನ ಇಲಾಖೆಯಲ್ಲಿ ಮಾಡಿರುವ ವರ್ಗಾವಣೆ ಆರೋಪ ಇವೆರಡು ಎನ್ನಾಗಿದೆ: ಮೈಸೂರು , ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಯಲ್ಲಿದ್ದ ಮುಖ್ಯ ಇಂಜಿನಿಯರ್ (ವಿದ್ಯುತ್) ಶ್ರೀಮತಿ ಡಿ.ಪದ್ಮಾವತಿ ಅವರನ್ನು ಮಂಗಳೂರು ವಿದ್ಯುತ್‌ ಸರಬರಾಜು ನಿಗಮ ನಿಯಮಿತ ವ್ಯವಸ್ತಾಪಕ ನಿರ್ದೇಶಕರು ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಎರಡನೆಯದಾಗಿ ತಿತೀರಾ ಎನ್.ಅಪ್ಪಚ್ಚು ಮುಖ್ಯ ವಿದ್ಯುತ್ ಪರಿವೀಕ್ಷಕರು, ದಕ್ಷಿಣ ವಲಯ, ಬೆಂಗಳೂರು ಅವರನ್ನು ವೇತನ ಹೆಚ್ಚಿಸಿ ಸ್ಥಾನ ಭಡ್ತಿ ಮಾಡಿ, ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯಲ್ಲಿ ಮುಖ್ಯ ವಿದ್ಯುತ್‌ ಪರಿವೀಕ್ಷಕರ ಹುದ್ದೆಗೆ ನೇಮಿಸಲಾಗಿತ್ತು.

ಇನ್ನು ಡಿಕೆಶಿ ಅವರ ವಿರುದ್ಧ ಕೂಡ ಗುಡುಗಿರುವ ಹೆಚ್‌ಡಿಕೆ ಟನಲ್ ಮಾಡೋಕೆ ಹೋಗಿ ಬೆಂಗಳೂರನ್ನು ಸಮಾಧಿ ಮಾಡಿದ್ರಿ. ಈಗಾಗಲೇ ಅಭಿವೃದ್ಧಿ ವಿಚಾರದಲ್ಲಿ ಸಮಾಧಿಯಾಗಿದೆ. ಬೆಂಗಳೂರು ಸಮಸ್ಯೆಗೆ ವೈಜ್ಞಾನಿಕ ರೀತಿಯಲ್ಲಿ ಕೆಲ್ಸ ಮಾಡಿ. ಟನಲ್ ಮಾಡಿಸೋಕೆ ಹೋಗಿ ಬೆಂಗಳೂರು ಹಾಳ್ ಮಾಡಬೇಡಿ. 1999ರಿಂದ ಬೆಂಗಳೂರನ್ಹೇನುಗೆ ಅಭಿವೃದ್ದಿ‌ ಮಾಡಿದ್ದೀರಿ ಎಂದು ಬೇಕಾದಷ್ಟು ದಾಖಲೆ ಇದೆ ಎಂದಿದ್ದಾರೆ.