ಡಿಕೆ ಶಿವಕುಮಾರ್ ಜೈಲು ಹಕ್ಕಿ ಎಂದ ಅಶ್ವತ್ಥ್ ನಾರಾಯಣ!

ಮತ್ತೆ ರಾಮನಗರದಲ್ಲಿ ಡಿಕೆಶಿ ವಿರುದ್ಧ ತೊಡೆತಟ್ಟಿದ್ದಾರೆ ಸಚಿವ ಅಶ್ವತ್ಥ ನಾರಾಯಣ್. ಜೈಲು ಹಕ್ಕಿ ಬೇಲ್‌ ಮೇಲೆ ಹೊರಗಿದೆ. ಅದು ಶಾಶ್ವತವಾಗಿ ತಿಹಾರ್‌ನಲ್ಲಿರಬೇಕಿತ್ತು ಎಂದು ಕುಟುಕಿದ್ದಾರೆ.
 

First Published May 10, 2022, 8:46 PM IST | Last Updated May 10, 2022, 8:46 PM IST

ಬೆಂಗಳೂರು (ಮೇ. 10): ಇನ್ನೊಬ್ಬರ ವಿರುದ್ಧ ಷಡ್ಯಂತ್ರ ಮಾಡೋದೇ ಡಿಕೆ ಶಿವಕುಮಾರ್ (DK Shivakumar ) ಕೆಲಸ. ನೂರು ಜನ್ಮ ಎತ್ತಿ ಬಂದರೂ ನನ್ನ ಹೆಸರಿಗೆ ಮಸಿ ಬಳಿಯಲು ಸಾಧ್ಯವಿಲ್ಲ ಎಂದು ಸಚಿವ ಸಿಎನ್ ಅಶ್ವತ್ಥ್ ನಾರಾಯಣ್ (C N Ashwath Narayan ) ಹೇಳಿದ್ದಾರೆ.

ರಾಮನಗರದಲ್ಲಿ (RamaNagara) ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಅವರು, ಮಾನ ಮರ್ಯಾದೆ  ಇಲ್ಲದೆ ತೇಜೋವಧೆ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿಯ ತೇಜೋವಧೆ ಮಾಡೋದು ಎಷ್ಟರ ಮಟ್ಟಿಗೆ ಸರಿ. ಡಿಕೆಶಿ ಮಾಡಿರೋ ಕರ್ಮದಿಂದ ನಮಗೆಲ್ಲಾ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಜೈಲು ಹಕ್ಕಿ ಎಂದು ಅಶ್ವತ್ಥ್ ನಾರಾಯಣ್ ವ್ಯಂಗ್ಯವಾಡಿದ್ದಾರೆ.

PSI ಹಗರಣದಲ್ಲಿ ಶಾಸಕ- ಸಚಿವರು? ಡಿಕೆ ಶಿವಕುಮಾರ್‌ ಹೊಸ ಬಾಂಬ್, ಗಂಭೀರ ಆರೋಪ

ಮರ್ಯಾದೆ ಇರೋರು ಮಾಡೋ ಕೆಲ್ಸಾನಾ ಇದು. ಜೈಲಿಗೆ ಹೋಗಿ ಬಂದವರು ಎಂದು ಸಿದ್ಧರಾಮಯ್ಯ (siddaramaiah) ಹೇಳ್ತಾರೆ. ಆದರೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ಜೈಲಿಗೆ ಹೋಗಿ ಬಂದಿದ್ದಾರೆ. ಡಿಕೆಶಿ ಮಾಡಿರೋ ಕರ್ಮಕ್ಕೆ ಅವರೇ ಶಿಕ್ಷೆ ಅನುಭವಿಸಬೇಕು ಎಂದು ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.