Asianet Suvarna News Asianet Suvarna News

40% ಕಮಿಷನ್ : ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪಗೆ ಕ್ಲೀನ್‌ಚಿಟ್, ಮುಂದೇನು?

ರಾಷ್ಟ್ರಮಟ್ಟದಲ್ಲಿ  ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ (Santosh Suicide Case) ಪ್ರಕರಣ ಸಂಚಲನ ಮೂಡಿಸಿತ್ತು. ಇದು ಅಂದಿನ ಸಚಿನವಾಗಿದ್ದ ಕೆ.ಎಸ್‌.ಈಶ್ವರಪ್ಪ ಕೊರಳಿಗೆ ಉರುಳಾಗಿತ್ತು. ಇದೀಗ ಅವರಿಗೆ ದೊಡ್ಡ ರಿಲೀಫ್‌ ಸಿಕ್ಕಿದ್ದು, ಉಡುಪಿ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ.

ಬೆಳಗಾವಿ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ (Santosh Suicide Case) ಪ್ರಕರಣ ಸಂಚಲನ ಮೂಡಿಸಿತ್ತು. ಇದು ಅಂದಿನ ಸಚಿನವಾಗಿದ್ದ ಕೆ.ಎಸ್‌.ಈಶ್ವರಪ್ಪ ಕೊರಳಿಗೆ ಉರುಳಾಗಿತ್ತು. ಇದೀಗ ಅವರಿಗೆ ದೊಡ್ಡ ರಿಲೀಫ್‌ ಸಿಕ್ಕಿದ್ದು, ಉಡುಪಿ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ.

ಸಂತೋಷ್ ಪ್ರಕರಣದಿಂದ ಚೌಡೇಶ್ವರಿ ಮುಕ್ತಿ ನೀಡಿದ್ದಾಳೆ: ಈಶ್ವರಪ್ಪ

ಉಡುಪಿಯ ಹೊಟೇಲ್‌ವೊಂದರಲ್ಲಿ ಸಂತೋಷ್‌ ಪಾಟೀಲ್‌ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಈಶ್ವರಪ್ಪ ಪ್ರಚೋದಿಸಿದ್ದಾರೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಗಳು ಇಲ್ಲ ಎಂದು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಉಡುಪಿ ಪೊಲೀಸರು 1890 ಪುಟಗಳ ತನಿಖಾ ವರದಿಯನ್ನು ಸಿದ್ದಪಡಿಸಿದ್ದು, 85 ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ನೈತಿಕ ಹೊಣೆ ಹೊತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಖಾತೆಗೆ ಕೆ.ಎಸ್‌.ಈಶ್ವರಪ್ಪ ಅವರು ಕಳೆದ ಏ.15ರಂದು ರಾಜೀನಾಮೆ ಸಲ್ಲಿಸಿದ್ದರು.

ಸುಸೈಡ್ ಕೇಸ್‌ನಲ್ಲಿ ಕ್ಲೀನ್ ಚಿಟ್, ಈಶ್ವರಪ್ಪ ಮೊದಲ ಪ್ರತಿಕ್ರಿಯೆ, ಮತ್ತೆ ಮಂತ್ರಿಯಾಗುವ ಬಗ್ಗೆ ಹೇಳಿದ್ದಿಷ್ಟು

ಇದೀಗ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿರುವುದು ಈಶ್ವರಪ್ಪ ಅವರಿಗೆ ರಿಲೀಫ್‌ ಸಿಕ್ಕಿದ್ದು, ಮತ್ತೊಮ್ಮೆ ಸಚಿವ ಸ್ಥಾನ ಸಿಗುವ ಆಸೆ ಚಿಗುರೊಡೆದಿದೆ. ಆದರೆ, ನ್ಯಾಯಾಲಯವು ವರದಿಯನ್ನು ಇನ್ನೂ ಅಂಗೀಕರಿಸಿಲ್ಲ. ಬಿ ರಿಪೋರ್ಟ್ ಕುರಿತು ತೀರ್ಪು ಪ್ರಕಟಿಸಿದ ಬಳಿಕವಷ್ಟೇ ಈಶ್ವರಪ್ಪ ನಿರಾಳರಾಗಲಿದ್ದಾರೆ. ಜೊತೆಗೆ ಮೃತ ಸಂತೋಷ್‌ ಪಾಟೀಲ್‌ ಕುಟುಂಬಸ್ಥರಿಂದ ವರದಿಗೆ ಆಕ್ಷೇಪ ವ್ಯಕ್ತವಾಗದಿದ್ದರೆ ನ್ಯಾಯಾಲಯವು ಪ್ರಕರಣವನ್ನು ಮುಗಿಸುವ ಸಾಧ್ಯತೆ ಇದೆ. ಇಲ್ಲದಿದ್ದರೆ ಮತ್ತೆ ಸಂಕಷ್ಟಎದುರಾಗುವ ಸಾಧ್ಯತೆ ಇರಲಿದೆ.
 

Video Top Stories