Asianet Suvarna News Asianet Suvarna News

ಸುಸೈಡ್ ಕೇಸಿನಲ್ಲಿ ಕ್ಲೀನ್ ಚಿಟ್, ಈಶ್ವರಪ್ಪ ಮೊದಲ ಪ್ರತಿಕ್ರಿಯೆ, ಮತ್ತೆ ಮಂತ್ರಿಯಾಗುವ ಬಗ್ಗೆ ಹೇಳಿದ್ದಿಷ್ಟು

ಗುತ್ತಿಗೆದಾರ ಸಂತೋಷ್ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಮೇಲಿನ ಆರೋಪಕ್ಕೆ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಉಡುಪಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಇದರಿಂದ ಈಶ್ವರಪ್ಪಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇನ್ನು ಈ ಬಗ್ಗೆ ಅವರು ಮಾಧ್ಯಮಗಳಿಗೆ ನೀಡಿದೆ ಮೊದಲ ಪ್ರತಿಕ್ರಿಯೆ ಹೀಗಿದೆ.

KS Eshwarappa First Reaction after Cleared In Contractor Suicide Case rbj
Author
Bengaluru, First Published Jul 20, 2022, 8:49 PM IST

ಶಿವಮೊಗ್ಗ, (ಜುಲೈ.20): ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಉಡುಪಿ ನಗರ ಪೊಲೀಸರಿಂದ ಬಿ ರಿಪೋರ್ಟ್ ಸಲ್ಲಿಕೆಯಾಗಿದ್ದು ಈಶ್ವರಪ್ಪ ಮೇಲಿನ ಆರೋಪಕ್ಕೆ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಲಾಗಿದೆ.

ಪ್ರಕರಣದಲ್ಲಿ ಖುಲಾಸೆಯಾಗುತ್ತಿದ್ದಂತೆ ಮಾಜಿ ಸಚಿವ ಈಶ್ವರಪ್ಪ ಅವರ ಶಿವಮೊಗ್ಗ ನಿವಾಸದಲ್ಲಿ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ಇನ್ನು ಈ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ನಾನು ಮುಕ್ತವಾಗಿ ಹೊರಗೆ ಬಂದಿದ್ದೇನೆ. ಆವತ್ತೇ ಹೇಳಿದ್ದೆ, ಆರೋಪದಿಂದ ಮುಕ್ತವಾಗಿ ಬರುತ್ತೇನೆ ಎಂದು. ಮನೆ ದೇವತೆ ಚೌಡೇಶ್ವರಿ ಆಶೀರ್ವಾದದಿಂದ , ಇಡೀ ದೇಶದ ಸಾಧು ಸಂತರ ಆಶೀರ್ವಾದ ನೀಡಿದ್ದರು. ನಮ್ಮ ಪಕ್ಷದ ನಾಯಕರು, ಕಾರ್ಯಕರತರು ಮುಜುಗರದಲ್ಲಿದ್ದರು, ಅವರೆಲ್ಲರೂ ಮುಜುಗರದಿಂದ ಹೊರ ಬಂದಿದ್ದಾರೆ ಸಂತಸ ವ್ಯಕ್ತಪಡಿಸಿದರು.

ಸಂತೋಷ್ ಆತ್ಮಹತ್ಯೆ ಕೇಸ್, ಈಶ್ವರಪ್ಪಗೆ ಕ್ಲೀನ್ ಚಿಟ್, ಪೋಸ್ಟರ್ ವೈರಲ್

ನಿರಾಧಾರವಾಗಿ ಆರೋಪ ಬಂದುದರಿಂದ ನನಗೆ ನೋವು ಇತ್ತು. ರಾಜಕಾರಣದಲ್ಲಿ ಆರೋಪಗಳು ಸಹಜ, ಆರೋಪದಿಂದ ಮುಕ್ತನಾದ ತೃಪ್ತಿ ಇದೆ. ನನ್ನನ್ನು ಮತ್ತೆ ಸಚಿವನನ್ನಾಗಿ ಮಾಡುವುದು ಬಿಜೆಪಿಗೆ ಬಿಟ್ಟದ್ದು, ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಈಗ ನಮ್ಮ ನಾಯಕರಾದ ಬಿ.ಎಸ್ . ಯಡಿಯೂರಪ್ಪ ಅವರು ಕರೆ ಮಾಡಿದ್ದರು. ಧೈರ್ಯವಾಗಿರಪ್ಪ, ಏನೂ ಆಗುವುದಿಲ್ಲಎಂದು ಹೇಳಿದರು, ಹಿಂದೆಯೂ ಹೇಳಿದ್ದರು ಎಂದರು.

ಈಶ್ವರಪ್ಪ, ಪೊಲೀಸರ ವಿರುದ್ಧ ಪ್ರತಿಭಟನೆ
ಈಶ್ವರಪ್ಪಗೆ ಕ್ಲೀನ್ ಚಿಟ್ ಕೊಟ್ಟಿರುವ ಸುದ್ದಿ ಹರಡುತ್ತಿದ್ದಂತೆಯೇ ಇತ್ತ ಬೆಳಗಾವಿ ತಾಲೂಕಿನ ಬಡಸ ಗ್ರಾಮದ ದಿ.ಸಂತೋಷ ಪಾಟೀಲ್ ಮನೆ ಎದುರು ಪ್ರತಿಭಟನೆ ಮಾಡುತ್ತಿದ್ದು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಕೂಗಿದರು.

ಅಯ್ಯಯ್ಯೋ ಅನ್ಯಾಯ.. ಈಶ್ವರಪ್ಪಗೆ ಧಿಕ್ಕಾರ...ಪೊಲೀಸ್ ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು,
ನ್ಯಾಯ ಸಿಗೋವರೆಗೂ ಹೋರಾಟ ಮಾಡ್ತೇವೆ ಎಂದಿದ್ದಾರೆ.

ಸಂತೋಷ ಪಾಟೀಲ್ ಪತ್ನಿ ರೇಣುಕಾ ಕಣ್ಣೀರು
ಬಿ ರಿಪೋರ್ಟ್‌ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂತೋಷ್ ಪಾಟೀಲ್ ಪತ್ನಿ ರೇಣಿಕಾ, ಪೊಲೀಸರು ಪ್ರಭಾವಕ್ಕೆ ಒಳಗಾಗಿ ತನಿಖೆ ಮಾಡಿದ್ದಾರೆ. ನನ್ನ ಗಂಡನ ಮೊಬೈಲ್‌ನಲ್ಲಿ ಎಲ್ಲಾ ಸಾಕ್ಷ್ಯಗಳು ಇದ್ದವು. ಈವರೆಗೂ ನನ್ನ ಗಂಡನ ಮೊಬೈಲ್ ನಮಗೆ ಕೊಟ್ಟಿಲ್ಲ. ನನ್ನ ಗಂಡನ ಸಹೋದರ ತನಖಾಧಿಕಾರಿ, ಎಸ್‌ಪಿಗೆ ಫೋನ್ ಮಾಡಿದ್ರೆ ರಿಸೀವ್ ಮಾಡಿಲ್ಲ ಎಂದು ಕಣ್ಣೀರು ಹಾಕಿದರು.

ರಾಜ್ಯಪಾಲರಿಗೆ ನಾನು ಪತ್ರ ಬರೆದು ಮನವಿ ಮಾಡಿದ್ದೆ. 15 ದಿನಗಳಲ್ಲಿ ನಾನು ಪ್ರಕರಣದಿಂದ ಹೊರ ಬರ್ತೀನಿ ಅಂತಾ ಈಶ್ವರಪ್ಪ ಹೇಳಿದ್ರು. ಈಗ ಬಿ ರಿಪೋರ್ಟ್ ಸಲ್ಲಿಕೆ ಆದ್ರೆ ಹಾಗೇ ಅನಿಸುತ್ತೆ ಅಲ್ವಾ? ಡೆತ್‌ನೋಟ್ ಬರೆದ್ರೆ ಮಾತ್ರ ಮಾನ್ಯ ಆಗುತ್ತಾ? ನಾವು ಡೆತ್‌ನೋಟ್ ಬರೆದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ್ರೆ ಮಾನ್ಯ ಆಗುತ್ತಾ? ಎಂದು ಆಕ್ರೊಶ ವ್ಯಕ್ತಪಡಿಸಿದರು.

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ "ತಾವು ಮಾಡಿರುವ ಕೆಲಸಕ್ಕೆ ಹಣ ಬಿಡುಗಡೆ ಮಾಡಲು 40 ಪರ್ಸೆಂಟ್‌ ಲಂಚ ಕೇಳುತ್ತಿದ್ದಾರೆ' ಎಂದು ಆರೋಪಿಸಿದ್ದರು. ಅಲ್ಲದೆ ತಮ್ಮ ಸಾವಿಗೆ ಈಶ್ವರಪ್ಪ ಕಾರಣ ಎಂದು ವಾಟ್ಸ್‌ ಆಯಪ್‌ ಮೆಸೇಜ್‌ ಮಾಡಿ ಏ.12 ರಂದು ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತೋಷ್‌ ಆತ್ಮಹತ್ಯೆ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿತ್ತು. ಬಳಿಕ ರಾಜಕೀಯ ಒತ್ತಡದ ಕಾರಣದಿಂದ ಕೆ.ಎಸ್.ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿಡಿದ್ದರು.

ಸಂತೋಷ್ ಪಾಟೀಲ್ ವೈಯಕ್ತಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ನೆಲೆಗಟ್ಟಿನಲ್ಲಿ ತನಿಖೆ ಮುಂದುವರಿಸಲಾಗುತ್ತಿದೆ. 1890 ಪುಟಗಳ ತನಿಖಾ ವರದಿ ಸಲ್ಲಿಕೆಯಾಗಿದ್ದು, ಆ ಪೈಕಿ 85 ಪುಟಗಳ ಅಂತಿಮ ವರದಿ ಸಲ್ಲಿಕೆಯಾಗಿದ್ದು, ಆತ್ಮಹತ್ಯೆ ಪ್ರಚೋದನೆ ನೀಡುವಲ್ಲಿ ಈಶ್ವರಪ್ಪ ಅವರ ಪಾತ್ರವಿಲ್ಲ ಎಂದು ವರದಿ ನೀಡಲಾಗಿದೆ ಎಂದು ತಿಳಿದು ಬಂದಿದೆ. 

Follow Us:
Download App:
  • android
  • ios