Asianet Suvarna News Asianet Suvarna News

ರಾಜ್ಯದ 11 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್‌ ಕೋಕ್‌ : ಲೋಕಸಂಗ್ರಾಮಕ್ಕೆ ಬಿಜೆಪಿ ತಾಲೀಮು ಆರಂಭ

ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಎಲೆಕ್ಷನ್‌ನಲ್ಲೂ ಬಿಜೆಪಿಗೆ ಸೀನಿಯರ್ಸ್ ಸಂಕಟ ಎದುರಾಗಲಿದೆ. ಬಿಜೆಪಿಯ 11 ಮಂದಿ ಹಾಲಿ ಸಂಸದರಿಗೆ ಮತ್ತೆ ಟಿಕೆಟ್ ಸಿಗೋದೇ ಡೌಟ್ ಅಂತೆ.

ಬೆಂಗಳೂರು (ಜೂ.07): ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಎಲೆಕ್ಷನ್'ನಲ್ಲೂ ಬಿಜೆಪಿಗೆ ಎದುರಾಗಲಿದ್ಯಾ ಸೀನಿಯರ್ಸ್ ಸಂಕಟ.. ಬಿಜೆಪಿಯ 11 ಮಂದಿ ಹಾಲಿ ಸಂಸದರಿಗೆ ಮತ್ತೆ ಟಿಕೆಟ್ ಸಿಗೋದೇ ಡೌಟ್ ಅಂತೆ. ಟಿಕೆಟ್ ತೂಗುಗತ್ತಿ ತೂಗ್ತಾ ಇರೋದು ಯಾರ್ಯಾರ ತಲೆ ಮೇಲೆ..? ಟಿಕೆಟ್ ಕೈತಪ್ಪಲಿರೋ ಬಿಜೆಪಿ ಸಂಭಾವ್ಯ ಸಂಸದರು ಯಾರ್ಯಾರು..? ಟಿಕೆಟ್ ಮಿಸ್ ಅನ್ನೋದಾದ್ರೆ ಯಾವ್ಯಾವ ಕಾರಣಕ್ಕೆ..? ಕೇಸರಿ ಪಾಳೆಯದಲ್ಲಿ ಸಂಚಲನ ಎಬ್ಬಿಸಿರೋ ಆ ಟಿಕೆಟ್ ಸೀಕ್ರೆಟ್'ನ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಮಿಸ್ಸಾಗಲಿರುವ 11 ಮಂದಿ ಸಂಭಾವ್ಯರಲ್ಲಿ ಇನ್ನೂ ನಾಲ್ಕು ಮಂದಿ ಇದ್ದಾರೆ. 11 ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಮಿಸ್ಸಾದ್ರೆ, ಅವರ ಬದಲು ಯಾರಿಗೆ ಟಿಕೆಟ್..? ಟಿಕೆಟ್ ರೇಸ್'ನಲ್ಲಿರುವ ಸಂಭಾವ್ಯರ ಪಟ್ಟಿ ಇಲ್ಲಿದೆ.  ದಕ್ಷಿಣ ಭಾರತದಲ್ಲಿ ಬಿಜೆಪಿ ಸ್ಟ್ರಾಂಗ್ ಆಗಿರೋ ಒಂದೇ ಒಂದು ರಾಜ್ಯ ಅಂದ್ರೆ ಅದು ಕರ್ನಾಟಕ. ಹೀಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಕರ್ನಾಟಕದಲ್ಲೇ ಹೆಚ್ಚಿನ ಸ್ಥಾನಗಳನ್ನ ಗೆಲ್ಲಬೇಕಾದ ಅನಿವಾರ್ಯತೆ ಬಿಜೆಪಿ ಮುಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಹಿರಿಯರಿಗೆ ಟಿಕೆಟ್ ನಿರಾಕರಿಸಿ ಪೆಟ್ಟು ತಿಂದಿರುವ ಬಿಜೆಪಿ, ಲೋಕಸಭಾ ಚುನಾವಣೆಯಲ್ಲೂ ಅಂಥದ್ದೇ ರಿಸ್ಕ್ ತಗೊಳತ್ತಾ..? ಕಾದು ನೋಡಬೇಕಿದೆ.