Karnataka Election 2023: ಮತಗಟ್ಟೆ ಎದುರು ಧರಣಿ ಕುಳಿತ ಅಜ್ಜಿ: ತೋರಿಸಿದ ಚಿಹ್ನೆ ಮತ ಹಾಕಿಲ್ಲ ಎಂದ ಆರೋಪ

ಮತದಾನ ಮಾಡಲು ಬಂದಿದ್ದ ಅಜ್ಜಿಯೊಬ್ಬಳು ಮತಗಟ್ಟೆಯ ಮುಂದೆ ಧರಣಿ ಕುಳಿತ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಮತಗಟ್ಟೆ ಸಂಖ್ಯೆ 53ರಲ್ಲಿ ನಡೆದಿದೆ. 85 ವರ್ಷದ ಮುಕ್ತುಂಬೀ ದೊಡ್ಡಮನಿ ಹೆಸರಿನ ಅಜ್ಜಿ ಮತ ಚಲಾಯಿಸಲು ತನ್ನ ಮೊಮ್ಮಗನ ಜೊತೆಗೆ ಮತಗಟ್ಟೆಗೆ ಆಗಮಿಸಿದ್ದರು. 

First Published May 10, 2023, 3:01 PM IST | Last Updated May 10, 2023, 3:01 PM IST

ಗದಗ (ಮೇ.10): ಮತದಾನ ಮಾಡಲು ಬಂದಿದ್ದ ಅಜ್ಜಿಯೊಬ್ಬಳು ಮತಗಟ್ಟೆಯ ಮುಂದೆ ಧರಣಿ ಕುಳಿತ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಮತಗಟ್ಟೆ ಸಂಖ್ಯೆ 53ರಲ್ಲಿ ನಡೆದಿದೆ. 85 ವರ್ಷದ ಮುಕ್ತುಂಬೀ ದೊಡ್ಡಮನಿ ಹೆಸರಿನ ಅಜ್ಜಿ ಮತ ಚಲಾಯಿಸಲು ತನ್ನ ಮೊಮ್ಮಗನ ಜೊತೆಗೆ ಮತಗಟ್ಟೆಗೆ ಆಗಮಿಸಿದ್ದರು. ಆದರೆ, ಚುನಾವಣಾ ಅಧಿಕಾರಿಗಳು ಮೊಮ್ಮಗನನ್ನು ಅಜ್ಜಿಯ ಜೊತೆಗೆ ಬಿಡಲಿಲ್ಲ ಎಂದು ಹೇಳಲಾಗಿದೆ. ಅಲ್ಲದೆ, ಅಜ್ಜಿ ತೋರಿಸಿದ ಚಿಹ್ನೆಗೆ ಮತ ಹಾಕದೆ ಬೇರೆ ಗುರುತಿಗೆ ಅಧಿಕಾರಿಗಳು ಮತಹಾಕಿಸಿದ್ದಾರೆ ಎಂದು ಅಜ್ಜಿ ಗಂಭೀರ ಆರೋಪ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ತಹಸೀಲ್ದಾರ ಸೇರಿದಂತೆ ಹಿರಿಯ ಅಧಿಕಾರಿಗಳು ಬರುವಂತೆ ಅಜ್ಜಿ ಪಟ್ಟು ಹಿಡಿದಿದ್ದಾರೆ. ಮತಗಟ್ಟೆಯ ಮುಂದೆಯೇ ಅಜ್ಜಿ ಧರಣಿ ಕುಳಿತಿದಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಇಂದು (ಮೇ.10) ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
 

Video Top Stories