
JDS: ಇಂದು 'ದಳಪತಿ'ಗಳ ಮೀಟಿಂಗ್: ಹಾಸನ ಟಿಕೆಟ್ ಫೈನಲ್?
ರಾಜ್ಯದಲ್ಲಿ ವಿಧಾನಸಭೆ ಅಖಾಡಕ್ಕೆ ವೇದಿಕೆ ಸಿದ್ಧವಾಗಿದ್ದು, ಇತ್ತ ದಳಪತಿ ಕುಟುಂಬಕ್ಕೆ ಹಾಸನ ಟಿಕೆಟ್ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ.
ಹಾಸನ ಟಿಕೆಟ್ ವಿಚಾರವಾಗಿ ಜೆಡಿಎಸ್ ಪಕ್ಷದಲ್ಲಿ ಅಸಮಾಧಾನ ಉಂಟಾಗಿದ್ದು, ದೇವೇಗೌಡರ ಮನೆಯಲ್ಲಿ ಇಂದು ಮಹತ್ವದ ಸಭೆ ನಡೆಯಲಿದೆ. ಶಿವರಾತ್ರಿ ಹಬ್ಬದ ನೆಪದಲ್ಲಿ ಗೌಡರ ಕುಟುಂಬ ಸೇರಲಿದೆ. ಪ್ರೀತಂಗೌಡ ಸವಾಲು ಸ್ವೀಕರಿಸಲು ರೇವಣ್ಣ ಕುಟುಂಬ ಸಿದ್ಧವಾಗಿದ್ದು, ಭವಾನಿಗೆ ಸಿಗದಿದ್ರೆ ನಾನೇ ಸ್ಪರ್ಧೆ ಮಾಡ್ತೀನಿ ರೇವಣ್ಣ ಈಗಾಗಲೇ ತಿಳಿಸಿದ್ದಾರೆ. ಹೊಳೆನರಸೀಪುರ, ಹಾಸನದಿಂದ ರೇವಣ್ಣ ಸ್ಪರ್ಧೆ ಸಾಧ್ಯತೆ ಇದೆ. ಸ್ವರೂಪ್‌ಗೆ ಟಿಕೆಟ್ ನೀಡಲು ಕುಮಾರಸ್ವಾಮಿ ಇಚ್ಛಿಸಿದ್ದು, ಭವಾನಿಗೆ ಟಿಕೆಟ್ ಕೊಡಿಸಲು ರೇವಣ್ಣ ಫ್ಯಾಮಿಲಿ ಒತ್ತಾಯ ಮಾಡುತ್ತಿದೆ.