ಕಾರ್ಕಳದಿಂದ ಪ್ರಮೋದ್ ಮುತಾಲಿಕ್ ಸ್ಪರ್ಧೆ: ಶ್ರೀರಾಮ ಸೇನೆಯಲ್ಲಿ ಅಸಮಾಧಾನದ ಹೊಗೆ

ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಪ್ರಮೋದ್ ಮುತಾಲಿಕ್ ಸ್ಪರ್ಧೆ ವಿಚಾರವಾಗಿ ಶ್ರೀರಾಮ ಸೇನೆಯಲ್ಲಿ ಬಿರುಕು ಮೂಡಿದ್ದು, ಎರಡು ಬಣಗಳು ಹುಟ್ಟಿಕೊಂಡಿವೆ. 

Share this Video
  • FB
  • Linkdin
  • Whatsapp

ಪ್ರಮೋದ್ ಮುತಾಲಿಕ್‌ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದು, ಈ ವಿಚಾರವಾಗಿ ಶ್ರೀರಾಮ ಸೇನೆಯಲ್ಲೇ ಬಿರುಕು ಮೂಡಿದೆ. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಂಗಳೂರು ವಿಭಾಗದ ಅಧ್ಯಕ್ಷ ಮೋಹನ್‌ ಭಟ್‌ ಒತ್ತಾಯಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿ ಸೋತು ಅವಮಾನಿತರಾಗಬೇಡಿ. ಸ್ಪರ್ಧೆಗೆ ಶ್ರೀರಾಮ ಸೇನೆ ಬೆಂಬಲವಿಲ್ಲ ಎಂದು ಒತ್ತಾಯಿಸಿದ್ದಾರೆ. ಇನ್ನು ಈ ವಿಚಾರವಾಗಿ ಉಡುಪಿ ಜಿಲ್ಲಾಧ್ಯಕ್ಷ ಜಯರಾಮ್‌ ಅಂಬೇಕಲ್‌ ಮಾತನಾಡಿ, ಅನಗತ್ಯ ಗೊಂದಲ ಸೃಷ್ಠಿಸಲಾಗಿದೆ. ಉಡುಪಿ ಜಿಲ್ಲೆ ಕಾರ್ಯಕರ್ತರು ಎಂದೆಂದಿಗೂ ಮುತಾಲಿಕ್‌ ಜತೆಗಿದ್ದೇವೆ ಎಂದು ಮೋಹನ್‌ ಭಟ್‌'ಗೆ ಟಾಂಗ್ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video